ಯುಎಇ:
ಭಾರತದಂತಹ ದೇಶಗಳಿಗೆ ಅತ್ಯುತ್ತಮ ದರ್ಜೆಯ ವಿವಿಐಪಿ ಚಾಪರ್ ಪೂರೈಕೆಗೆಂದು ನಡೆದ ಒಪ್ಪಂದದಲ್ಲಿ ಕಿಕ್ ಬ್ಯಾಕ್ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ದುಬೈ ಪ್ರಜೆಯಾದ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಅನ್ನು ಭಾರತಕ್ಕೆ ಹಸ್ತಾಂತರಕ್ಕೆ ಇದ್ದ ಎಲ್ಲಾ ಅಡ್ಡಿ ಆತಂಕಗಳನ್ನು ಯುಎಇ ನಿವಾರಿಸಿದ್ದು ಇನ್ನೂ ಹಸ್ತಾಂತರವಷ್ಟೇ ಬಾಕಿ ಉಳಿದಿದೇ ಎಂದು ಅಲ್ಲಿನ ಕೋರ್ಟ್ ನ ಮಾಧ್ಯಮ ವಿಭಾಗ ತಿಳಿಸಿದ್ದು ಬುಧವಾರ ಭಾರತಕ್ಕೆ ಬರಲ್ಲಿದ್ದಾನೆ ಎಂದು ತಿಳಿಸಿದ್ದಾರೆ .
ಅಲ್ಲಿನ ಉಚ್ಚ ನ್ಯಾಯಾಲಯವೂ ಮೈಕೆಲ್ ಪರ ವಕೀಲರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಯ ಬಳಿಕ ತಿರಸ್ಕರಿಸಿದೆ ಬಳಿಕ ದುಬೈ ಸರ್ಕಾರವು ಮೈಕೆಲ್ ಹಸ್ತಾಂತರಕ್ಕೆ ಆಡಳಿತಾತ್ಮಕ ಆದೇಶ ನೀಡಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದ್ದು ಯಾವಾಗ ಹಸ್ತಾಂತರ ನಡೆಯುವುದು ಎಂದು ಇನ್ನೂ ಪಕ್ವವಾಗಿ ತಿಳೀದಿಲ್ಲ .
ತನ್ನ ಕಕ್ಷೀದಾರ ಯಾವುದೇ ರೀತಿಯ ಕ್ರಮದಲ್ಲಿ ಪಾಲ್ಗೊಂಡಿಲ್ಲ ಈ ಪ್ರಕರಣವು ಶೇಕಡ 100ರಷ್ಟು ರಾಜಕೀಯ ಪ್ರೇರಿತವಾಗಿದೆ ಮತ್ತು ತನ್ನ ಕಕ್ಷಿದಾರರನ್ನು ಭಾರತೀಯ ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂಬ ಮೈಕೆಲ್ ಪರ ವಕೀಲ ಬಿನ್ ಸುವೈದಾನ್ ವಾದವನ್ನು ದುಬೈನ ಕ್ಯಾಸೇಶನ್ ಕೋರ್ಟ್ ತಿರಸ್ಕರಿಸಿದೆ.