ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಡಾ. ಮನಾಲಿ ದೇಸಾಯಿ ನೇಮಕ

ಲಂಡನ್:

    ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ  ನ್ಯೂನ್‌ಹ್ಯಾಮ್ ಕಾಲೇಜಿನ ಪ್ರಾದ್ಯಾಪಕಿ ಡಾ. ಮನಾಲಿ ದೇಸಾಯಿ  ಅಧಿಕಾರ ವಹಿಸಿಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ವಿಶ್ವವಿದ್ಯಾನಿಕಯವೊಂದರ ಒಂದು ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.

     ಕಂಪಾರಿಟಿವ್ ಆಂಡ್ ಹಿಸ್ಟೋರಿಕ್ ಸೋಷಿಯಾಲಜಿಯ ರೀಡರ್ ಹಾಗೂ ನ್ಯೂನ್‌ಹ್ಯಾಮ್ ಕಾಲೇಜಿನ ಫೆಲೋ ಆಗಿರುವ ದೇಸಾಯಿ, ಸಾಮಾಜಿಕ ಚಳುವಳಿಗಳು, ಜನಾಂಗೀಯ ಮತ್ತು ಲಿಂಗಭೇದದ ಹಿಂಸಾಚಾರ ಮತ್ತು ವಸಾಹತೋತ್ತರಅಧ್ಯಯನಗಳ ಮೇಲೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ