100 ಪಠ್ಯ ಪುಸ್ತಕ ಬ್ಯಾನ್ ಮಾಡಿದ ಪಾಕಿಸ್ತಾನ

ಲಾಹೋರ್:

     ಪಾಕಿಸ್ತಾನದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮೂದಿಸಿಲ್ಲದ, ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಇದ್ದ 100ಕ್ಕೂ ಹೆಚ್ಚು ಪಠ್ಯಪುಸ್ತಕವನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ರದ್ದುಗೊಳಿಸಿದೆ. ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ದಾಂತವನ್ನು ಖಂಡಿಸುವ ಸಾಲುಗಳು ಮತ್ತು ರಾಷ್ಟ್ರಕವಿ ಮೊಹಮ್ಮದ್ ಇಕ್ಬಾಲ್ ಅವರ ಜನ್ಮ ದಿನಾಂಕವನ್ನು ಪಠ್ಯ ಪುಸ್ತಕದಲ್ಲಿ ತಪ್ಪಾಗಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪುಸ್ತಕಗಳನ್ನು ಬ್ಯಾನ್ ಮಾಡಿದೆ. 

    ಪಂಜಾಬ್ ಪಠ್ಯಪುಸ್ತಕ ಬೋರ್ಡ್ ನ ವ್ಯವಸ್ಥಾಪಕ ನಿರ್ದೇಶಕ ರಾಯ್ ಮನ್ಜೂರ್ ನಾಸೀರ್ ಅವರು ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಲಿಂಕ್ ಇಂಟರ್ ನ್ಯಾಷನಲ್, ಪಾರಾಗಾನ್ ಬುಕ್ಸ್ ಪ್ರಕಾಶನಗಳ 10 ಸಾವಿರ ಆಕ್ಷೇಪಾರ್ಹ ಪುಸ್ತಕಗಳನ್ನು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ವಾಪಸ್ ಪಡೆಯಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap