ರಷ್ಯಾ:
ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದ ರಷ್ಯಾ ಈಗ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಆತುರದಲ್ಲಿದೆ. ಆರು ವಾರಗಳ ಪ್ರಯೋಗದ ಆಧಾರದ ಮೇಲೆ ರಷ್ಯಾ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಾಥಮಿಕ ಫಲಿತಾಂಶವನ್ನು ಬಿಡುಗಡೆ ಮಾಡಲು ಆಲೋಚಿಸುತ್ತಿದೆ.
ಸ್ಪುಟ್ನಿಕ್ ವಿ ಲಸಿಕೆ ರಚಿಸಿದ ಗ್ಯಾಮೆಲಿಯಾ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟೆಸ್‌ಬರ್ಗ್ ಈ ಮಾಹಿತಿ ನೀಡಿದ್ದಾರೆ. ಲಸಿಕೆ ಪರೀಕ್ಷೆ ವೇಗ ಪಡೆಯುವ ಅಗತ್ಯವಿದೆ. ಆದ್ರೆ ಯಾವುದೇ ರಾಜಿ ಮಾಡಿಕೊಂಡಿಲ್ಲವೆಂದು ಅವರು ಹೇಳಿದ್ದಾರೆ. ಯುದ್ಧ ನಡೆಯುತ್ತಿರುವಂತೆ ಜನರು ಸಾಯುತ್ತಿದ್ದಾರೆ. ಲಸಿಕೆಯ ಪರೀಕ್ಷೆ ವೇಗವನ್ನು ತೋರಿಸುವುದು ಮುಖ್ಯ. ಲಸಿಕೆಯ ಪರೀಕ್ಷೆಯಲ್ಲಿ ಅಗತ್ಯವಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಸುರಕ್ಷತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗಿದೆ ಎಂದಿದ್ದಾರೆ.
ಕೊರೊನಾ ಲಸಿಕೆ ಪ್ರಯೋಗ ವಿಶ್ವದಾದ್ಯಂತ ನಡೆಯುತ್ತಿದೆ. ಲಸಿಕೆ ಮೂರನೇ ಹಂತದ ಪ್ರಯೋಗದ ಫಲಿತಾಂಶ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಲು ರಷ್ಯಾ ಹವಣಿಸುತ್ತಿದೆ. ಅಕ್ಟೋಬರ್ ಅಥವಾ ನವೆಂಬರ್ ಒಳಗೆ ಲಸಿಕೆ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ. ಅನೇಕ ದೇಶಗಳ ಲಸಿಕೆಗಳು ತಮ್ಮ ಮೂರನೇ ಹಂತದ ಪ್ರಯೋಗದಲ್ಲಿವೆ. ಆದರೆ ಇಲ್ಲಿಯವರೆಗೆ ಯಾವುದೇ ದೇಶವು ಅದರ ಮಧ್ಯಂತರ ಫಲಿತಾಂಶಗಳನ್ನು ನೀಡಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ