ನ್ಯೂಯಾರ್ಕ್:
ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡಿರುವಂತಹ ಅಮೆರಿಕದ ಸೇನೆಯ ಮೆದುಳಾಗಿ ಕೆಲಸ ಮಾಡಿದ್ದ ರಕ್ಷಣಾ ಕಾರ್ಯದರ್ಶಿ ತಮ್ಮ ಸ್ಥಾನಕ್ಕೆ ಇಂದು ನಿವೃತ್ತಿ ಘೋಷಿಸಿದ್ದಾರೆ ಇದು ಅಮೇರಿಕ ಸೇನೆಯ ಪಾಲಿಗೆ ಅತಿದೊಡ್ಡ ನಷ್ಟ ಎಂದು ರಕ್ಷಣಾ ವಿಮರ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ಟ್ರಂಪ್ ಅವರು ಸಿರಿಯಾದಲ್ಲಿ ಶಾಂತಿ ಸ್ಥಾಪನೆಗೆಂದು ತೆರಳಿದ್ದ ಸೇನೆಯನ್ನು ಹಿಂಪಡೆಯಲು ಆದೇಶಿದ ಬೆನ್ನಲ್ಲೇ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ನಿವೃತ್ತಿ ಘೋಷಿಸಿರುವುದು ಆಶ್ಚರ್ಯ ಹಾಗು ಆತಂಕಕ್ಕೆ ಕಾರಣವಾಗಿದೆ.
ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ ಮ್ಯಾಟಿಸ್ ತಾವು ಹುದ್ದೆಯಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಮತ್ತು ರಕ್ಷಣಾ ಕಾರ್ಯದರ್ಶಿ ಹುದ್ದೆ ನಿರ್ವಹಿಸಲು ಅಮೆರಿಕ ಅಧ್ಯಕ್ಷರು ಅರ್ಹರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷದ ಫೆಬ್ರವರಿ 28ರಂದು ನನ್ನ ಅವಧಿ ಪೂರ್ಣಗೊಳ್ಳಲಿದೆ. ನೂತನ ರಕ್ಷಣಾ ಕಾರ್ಯದರ್ಶಿ ಆಯ್ಕೆ ಮಾಡಲು ಅಮೆರಿಕ ಸರ್ಕಾರಕ್ಕೆ ಸಾಕಷ್ಟು ಸಮಯ ಇದೆ ಎಂದು ಮ್ಯಾಟಿಸ್ ಅವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವರ್ಜೀನೀಯಾದ ಸೆನೆಟರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ
This is scary. Secretary Mattis has been an island of stability amidst the chaos of the Trump administration. As we’ve seen with the President’s haphazard approach to Syria, our national defense is too important to be subjected to the President’s erratic whims. https://t.co/9qPluSGLUc
— Mark Warner (@MarkWarner) December 20, 2018
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








