ವಾಷಿಂಗ್ಟನ್:
ಸದ್ಯದ ಪರಿಸ್ಥತಿಯಲ್ಲಿ ಕುಂಠಿತವಾಗಿರುವ ಭಾರತದ ಆರ್ಥಿಕ ಬೆಳವಣಿಗೆ ಕಂಡು ಜಾಗತಿಕವಾಗಿ ಭಾರತದ ಜಿಡಿಪಿ ಪ್ರಮಾಣ ಶೇ 6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ಸಿದ್ದ ಪಡಿಸಿದ ದ್ವೈವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಜತೆಗಿನ ಸಭೆಯ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ ಈ ವರದಿ ಬಿಡುಗಡೆ ಮಾಡಿದ್ದು. 2017-18ನೇ ವತ್ತೀಯ ವರ್ಷದಲ್ಲಿ ಶೇ 7.2ರಷ್ಟಿದ್ದ ಆರ್ಥಿಕ ವೃದ್ಧಿ ದರವು 2018–19ರಲ್ಲಿ ಶೇ 6.8 ದಾಖಲಾಗಿದೆ. ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳು ಚೇತರಿಸಿಕೊಂಡಿರುವುದರಿಂದ ಕೈಗಾರಿಕಾ ಉತ್ಪಾದನೆ ವೃದ್ಧಿ ದರ ಶೇ 6.9ಕ್ಕೆ ಏರಿಕೆ ಕಂಡಿದೆ.
ಕೃಷಿ ಮತ್ತು ಸೇವಾ ವಲಯಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ 2.9 ಮತ್ತು ಶೇ 7.5ರಷ್ಟು ಎಂದಿದೆ. 2019–20ರ ಮೊದಲ ತ್ರೈಮಾಸಿಕದಲ್ಲಿ ಬೇಡಿಕೆ ಕುಸಿತದಿಂದಾಗಿ ಕೈಗಾರಿಕೆ ಮತ್ತು ಸೇವಾ ವಲಯದ ಪೂರೈಕೆ ವಲಯ ಕುಂಠಿತ ಕಂಡಿರುವುದಾಗಿ ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ