ದಂಪತಿಯ ವಿಚ್ಚೇಧನಕ್ಕೆ ಕಾರಣವಾದ ಗೂಗಲ್ ಮ್ಯಾಪ್ಸ್ ನ ಫೋಟೊ …!!!
ಲಿಮಾ :
ಸಾಮಾನ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ಸ್ವಲ್ಪ ಹೆಚ್ಚೆ ಇರುತ್ತದೆ ಆದ್ದರಿಂದ ಅಲ್ಲಿ ವಿವಾಹೇತರ ಸಂಬಂಧಗಳು ಸಹ ಹೆಚ್ಚಾಗಿರುತ್ತವೆ ಅಂತಹುದೇ ಪ್ರಕರಣದಲ್ಲಿ ಪತಿರಾಯನೊಬ್ಬ ತನ್ನ ಪತ್ನಿ ಪ್ರಿಯಕರ ಜೊತೆಯಲ್ಲಿ ಇರುವುದನ್ನು ಗೂಗಲ್ ಮ್ಯಾಪ್ಸ್ ಮೂಲಕ ನೋಡಿದ ಪತಿ ತನ್ನ ಪತ್ನಿಗೆ ವಿಚ್ಚೇದನ ನೀಡಿದ ಘಟನೆ ಪೆರು ರಾಜಧಾನಿ ಲಿಮಾದಲ್ಲಿ ನಡೆದಿದೆ
ಪ್ರಸಿದ್ಧ ಸೇತುವೆಯೊಂದನ್ನು ತಲುಪಲು ಉತ್ತಮವಾದ ಮಾರ್ಗವನ್ನು ಹುಡುಕುತ್ತಿದ್ದ ಪತಿಗೆ ತನ್ನ ಜೀವನ ಹಳ್ಳ ಹಿಡಿದಿರುವುದನ್ನು ಗೂಗಲ್ ತೋರಿಸಿದೆ , ಗೂಗಲ್ ಸ್ಟ್ರೀಟ್ ನಲ್ಲಿ ತನ್ನ ಹೆಂಡತಿ ಪೋಟೋಗಳನ್ನು ನೋಡಿ ಬೆಚ್ಚಿ ಬಿದಿದ್ದ.ಪಾರ್ಕಿನ ಬೆಂಚ್ ಮೇಲೆ ಕುಳಿತಿದ್ದ ಮಹಿಳೆ ಕಾಲಿನ ಮೇಲೆ ಪುರುಷನೊಬ್ಬ ತಲೆ ಕೊಟ್ಟು ಮಲಗಿರುವ ಚಿತ್ರ ಗೂಗಲ್ ಸ್ಟ್ರೀಟ್ ನಲ್ಲಿ ಕಂಡುಬಂದಿತ್ತು ಮತ್ತು ಕೂಲಂಕುಶವಾಗಿ ಪರಿಶೀಲಿಸಿದಾಗ ಅದು ಆತನ ಹೆಂಡತಿ ಎಂದು ತಿಳಿದು ಬಂದಿದೆ.
ನಂತರ ಆ ವ್ಯಕ್ತಿ ತನ್ನ ಪತ್ನಿಗೆ ವಿಚ್ಚೇಧನ ನಿಡಿದ್ದಾನೆ ಎಂದು ತಿಳಿದು ಬಂದಿದೆ ಅದಕ್ಕಾಗಿಯೇ ದೊಡ್ಡವರು ಹೇಳುವುದು ನಾವು ಯಾರಿಗೂ ತಿಳಿಯದು ಎಂದು ಮಾಡುವ ಕೆಲಸಗಳನ್ನು ನೋಡಿಕೊಳ್ಲಲ್ಲು ಮೇಲೊಬ್ಬ ಕೂತಿರುತ್ತಾನೆ ಎಂದು.
