ಜಪಾನ್ : ಚಂಡಮಾರುತಕ್ಕೆ 11 ಸಾವು..!

ಟೋಕಿಯೋ:

      ಭಾರತದ ಮಿತ್ರ ರಾಷ್ಟ್ರ ಹಾಗು ದ್ವೀಪ ರಾಷ್ಟ್ರವೂ ಸಹ ಆಗಿರುವ ಜಪಾನ್ ನಲ್ಲಿ ಹೆಗ್ ಬಿಸ್ ಚಂಡಮಾರುತ ಅಪ್ಪಳಿಸಿದ್ದು,ಇದರ  ಪರಿಣಾಮ ಜಪಾನ್ ದೇಶದಾಧ್ಯಂತ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.ಬಿರುಗಾಳಿ ಸಹಿತ ಮಳೆಯಿಂದಾಗಿ ಈ ವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

     ಟೋಕಿಯೋ ಮೆಟ್ರೋಪೊಲಿಸ್ ಸೇರಿದಂತೆ ಹಲವೆಡೆ ವಾಸವಿರುವ 42 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ಥಳ ತೊರೆಯುವಂತೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ.ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಮುಂಜಾಗ್ರತಾ ಕ್ರಮವಾಗಿ ಸ್ಥಳಿಯರನ್ನು ಸ್ಥಳಾಂತರಿಸಿದ್ದಾರೆ.

     ಇಚಿಹರಾ ಪ್ರದೇಶದಲ್ಲಿ ಸುಂಟರಗಾಳಿಗೆ ಓರ್ವ ಬಲಿಯಾಗಿದ್ದು ಮೂವರು ಮಕ್ಕಳು ಸೇರಿದಂತೆ ಐವರಿಗೆ ಗಾಯಗಳಾಗಿವೆ. ಟೋಕಿಯೋದಲ್ಲಿ ಪ್ರತೀಕೂಲ ಹವಾಮಾನ ಹಿನ್ನೆಲೆಯಲ್ಲಿ ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap