ಟೆಸ್ಟ್ ಕ್ರಿಕೆಟ್ ಗೆ 143ನೇ ಹುಟ್ಟುಹಬ್ಬದ ಸಂಭ್ರಮ

ಮೆಲ್ಬೋರ್ನ್:

    ಕ್ರಿಕೆಟ್ ಕ್ರೀಡೆಯ ಆತ್ಮವೆಂದೇ ಕರೆಯುವ ಟೆಸ್ಟ್  ಕ್ರಿಕೆಟ್ ಜನ್ಮ ತಾಳಿ ಇಂದಿಗೆ 143 ವರ್ಷಗಳಾಗಿವೆ. 1877ರ ಇದೇ ದಿನದಂದು ಕ್ರಿಕೆಟ್ ಜನಕ ತಂಡ ಇಂಗ್ಲೆಂಡ್ ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವಾಡಿತ್ತು. ವಿಶ್ವದ ಅಧಿಕೃತ ಮೊದಲನೇ ಟೆಸ್ಟ್ ಪಂದ್ಯ ಇದಾಗಿತ್ತು.

    ಅಂದಿನ ಇಂಗ್ಲೆಂಡ್ ತಂಡವನ್ನು ಜೇಮ್ಸ್ ಲಿಲ್ಲಿ ಮುನ್ನಡೆಸಿದ್ದರು. 1877 ರ ಸರಣಿಗೆ ಮುಂಚಿತವಾಗಿ ಇಂಗ್ಲಿಷ್ ತಂಡಗಳು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದವು. ಆದರೆ, ಲಿಲ್ಲಿವೈಟ್ ನೇತೃತ್ವದ ತಂಡವು ಆಹ್ವಾನಕ್ಕಿಂತ ಹೆಚ್ಚಾಗಿ ಈ ತೀರಗಳಿಗೆ ವ್ಯಾಪಾರೋದ್ಯಮವಾಗಿ ಭೇಟಿ ನೀಡಿತ್ತು. ಉದ್ಘಾಟನಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 45 ರನ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.

    ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್ ನಲ್ಲಿ  169.3 ಓವರ್ ಗಳಿಗೆ 245ರನ್ ಗಳಿಗೆ ಆಲೌಟ್ ಆಗಿತ್ತು. ಆಸೀಸ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ಬನ್ನೆರ್ಮನ್ 285 ಎಸೆತಗಳಿಂದ 18 ಬೌಂಡರಿಯೊಂದಿಗೆ 165 ರನ್ ಗಳಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ನ ಮೊದಲ ಶತಕವಾಗಿತ್ತು. ಇವರನ್ನು ಬಿಟ್ಟರೆ ಇನ್ನುಳಿದವರು ಬಹುಬೇಗ ವಿಕೆಟ್ ಕೊಟ್ಟಿದ್ದರು. ಇಂಗ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್  ಮಾಡಿದ್ದಅಲ್ಫ್ರೆಡ್  ಶಾ ಹಾಗೂ ಸೌಥ್ ಎರ್ಟನ್  ತಲಾ ಮೂರು ವಿಕೆಟ್  ಕಬಳಿಸಿದ್ದರು. 

 

    ಬಳಿಕ ಪ್ರಥಮ ಇನಿಂಗ್ಸ್ ಮಾಡಿದ್ದ ಇಂಗ್ಲೆಂಡ್  ತಂಡ 136.1 ಓವರ್ ಗಳಿಗೆ 196 ರನ್ ಗಳಿಗೆ ಆಲೌಟ್  ಆಗಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್ ನಲ್ಲಿ 49 ರನ್  ಹಿನ್ನಡೆ ಅನುಭವಿಸಿತು. ಬಿಲ್ಲಿ ಮಿಡ್ ವಿಂಟರ್  ಐದು ವಿಕೆಟ್  ಕಬಳಿಸಿದ್ದರು. ಇಂಗ್ಲೆಂಡ್  ಪರ ಹ್ಯಾರಿ ಜಪ್  ನಿಧಾನಗತಿಯ ಬ್ಯಾಟಿಂಗ್  ಮಾಡಿದ್ದರು. 241 ಎಸೆತಗಳಲ್ಲಿ 63 ರನ್ ಗಳಿಸಿದ್ದರು. ಇವರ ಜತೆ, ಚಾರ್ಲ್ಸ್ ವುಡ್ ಹಾಗೂ ಅಲ್ಲೆನ್  ಹಿನ್  ಕ್ರಮವಾಗಿ 36 ಮತ್ತು 35 ರನ್ ಗಳಿಸಿದ್ದರು. 
 
    49 ರನ್  ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಲ್ಫ್ರೆಡ್  ಶಾ ಆಘಾತ ನೀಡಿದರು. 34 ಓವರ್ ಗಳಿಗೆ 38 ರನ್ ನೀಡಿ ಐದು ವಿಕೆಟ್  ಕಬಳಿಸಿದ್ದರು. ಇಂಗ್ಲೆಂಡ್  ಮಾರಕ ದಾಳಿಗೆ ಆಸ್ಟ್ರೇಲಯಾದ ಯಾವೊಬ್ಬ ಬ್ಯಾಟ್ಸ್ ಮನ್  ಕೂಡ ಪುಟಿದೇಳುವಲ್ಲಿ ವಿಫಲರಾಗಿದ್ದರು. ಟಾಮ್  ಹೂರನ್  20 ರನ್ ಗಳಿಸಿದ್ದು ಆಸೀಸ್  ಪರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಶಾಗೆ ಮತ್ತೊಂದು ತುದಿಯಲ್ಲಿ ಸಾಥ್  ನೀಡಿದ್ದ ಸೌಥ್ ಎರ್ಟನ್  ಮೂರು ವಿಕೆಟ್  ಕಿತ್ತಿದ್ದರು. ಬಳಿಕ 153 ರನ್  ಗುರಿ ಹಿಂಬಾಲಿಸಿದ ಇಂಗ್ಲೆಂಡ್  ತಂಡ ಕೂಡ ದ್ವಿತೀಯ ಇನಿಂಗ್ಸ್ ನಲ್ಲಿ ಆಸೀಸ್  ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾಗಿತ್ತು. ಮಾರಕ ದಾಳಿ ನಡೆಸಿಸ್ದ ಟಾಮ್  ಕೆಂಡಾಲ್  ಮಾರಕ ದಾಳಿ ನಡೆಸಿ ಇಂಗ್ಲೆಂಡ್  ತಂಡದ ಪತನಕ್ಕೆ ಕಾರಣರಾಗಿದ್ದರು. ಇವರು 33.1 ಓವರ್ ಗಳಿಗೆ 55 ರನ್ ನೀಡಿ ಪ್ರಮುಖ ಏಳು ವಿಕೆಟ್  ಕಬಳಿಸಿದ್ದರು. 

    ಇಂಗ್ಲೆಂಡ್  ಜಾನ್ ಸೆಲ್ಬಿ 31 ರನ್ ಹಾಗೂ ಜಾರ್ಜ್  ಉಲೆಟ್   24 ರನ್ ಗಳಿಸಿದರು. ಇವರನ್ನು ಬಿಟ್ಟು ಇನ್ನುಳಿದವರು ಆಸೀಸ್  ದಾಳಿಗೆ ತಲೆಬಾಗಿದರು. ಒಟ್ಟಾರೆ, ಇಂಗ್ಲೆಂಡ್  ತಂಡ ದ್ವಿತೀಯ ಇನಿಂಗ್ಸ್ ನಲ್ಲಿ108 ರನ್ ಗಳಿಗೆ ಆಲೌಟ್  ಆಗಿತ್ತು ಆ ಮೂಲಕ 45 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap