ನ್ಯೂಯಾರ್ಕ್:
ಅಮೆರಿಕದಿಂದ ಗಡೀಪಾರು ಮಾಡಿದ 145 ಭಾರತೀಯರು, ಇಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಗ್ಲಾದೇಶದ ಮೂಲಕ ವಿಶೇಷ ವಿಮಾನದ ಮೂಲಕ ಆಗಮಿಸಿದ್ದಾರೆ.ಹೆಚ್ಚಾಗಿ ಅಕ್ರಮ ವಲಸಿಗರು ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿದವರು. ಈ ವಿಮಾನದಲ್ಲಿ ಕೆಲವು ಬಾಂಗ್ಲಾದೇಶದ ನಾಗರಿಕರು ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಪ್ರಜೆಗಳು ಇದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾರತೀಯರಲ್ಲಿ ಹೆಚ್ಚಿನವರು ಕಳೆದ ವರ್ಷಗಳಲ್ಲಿ ಸ್ಥಳೀಯ, ಅಂತಾರಾಷ್ಟ್ರೀಯ ಏಜೆಂಟರ ಸಹಾಯದಿಂದ ಅಮೆರಿಕ ಪ್ರವೇಶಿಸಿದ್ದರು ಎಂದೂ ಹೇಳಲಾಗಿದೆ, ಅವರು ಅಕ್ರಮ ಮಾರ್ಗಗಳ ಮೂಲಕ ದೇಶಕ್ಕೆ ಪ್ರವೇಶಿಸುವ ಭರವಸೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಕೆಲವು ಬಾಂಗ್ಲಾದೇಶಿ ಮತ್ತು ಶ್ರೀಲಂಕಾ ಪ್ರಜೆಗಳಿದ್ದಾರೆ ಎಂದು ತಿಳಿದು ಬಂದಿದೆ. ಈ ಗಡೀಪಾರು ಆಗಿರುವವರ ಪೈಕಿ ಹೆಚ್ಚಿನವರು 20 ರಿಂದ 35 ವರ್ಷದೊಳಗಿನವರು . ಅವರೆಲ್ಲರಿಗೂ ತುರ್ತು ಪ್ರಮಾಣಪತ್ರಗಳನ್ನು ನೀಡಲಾಗಿದೆ, ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಡೀಪಾರು ಮಾಡಿದವರನ್ನು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ನಲ್ಲಿ ಬಂದಿಳಿದರು. ಒಬ್ಬ ವ್ಯಕ್ತಿಯ ಪ್ರವೇಶಕ್ಕೆ ಅನುಕೂಲವಾಗುವಂತೆ 10-15 ಲಕ್ಷ ರೂಪಾಯಿಗಳ ಶುಲ್ಕವನ್ನು ಪಡೆದು ಏಂಜೆಂಟರು ಅವರಿಗೆ ಮೋಸ ಮಾಡಿದ್ದಾರೆ ಎಂದು ತಳಿದು ಬಂದಿದೆ. ಅಕ್ಟೋಬರ್ 23 ರಂದು ಅಮೆರಿಕ 117 ಭಾರತೀಯರನ್ನು ಇದೇ ರೀತಿ ಗಡೀಪಾರು ಮಾಡಿತ್ತು .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
