ರಿಯೊ ಡಿ ಜನೈರೋ
ಬ್ರೆಜಿಲ್ ರಾಜಧಾನಿ ರಿಯೊ ಡಿ ಜನೈರೋದಲ್ಲಿ ಮಂಗಳವಾರ ರಾತ್ರಿ ಎರಡು ಕಟ್ಟಡಗಳು ಕುಸಿದು ಸುಮಾರು 16 ಮಂದಿ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಕಟ್ಟಡ ಕುಸಿದ ಪರಿಣಾಮ ದುರಂತ ಸಂಭವಿಸಿದ್ದು, ನಾಲ್ವರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ರಾತ್ರಿಯಿಡಿ ನಡೆದ ಕಾರ್ಯಾಚರಣೆಯಲ್ಲಿ ಇದುವರೆಗೆ 16 ಮಂದಿಯ ದೇಹಗಳನ್ನು ಹೊರ ತೆಗೆಯಲಾಗಿದ್ದು, ಇನ್ನು 8 ಜನರು ಕಣ್ಮರೆಯಾಗಿದ್ದಾರೆ.
ಇಂದು ಬೆಳಗ್ಗೆ ಮಹಿಳೆಯೊಬ್ಬರ ಶವ ಹೊರ ತೆಗೆದಿದ್ದ ರಕ್ಷಣಾ ತಂಡ, ನಂತರ ಗರ್ಭಿಣಿ ಮಹಿಳೆ ಹಾಗೂ ಆಕೆಯ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ದುರ್ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಕುಸಿದ ಕಟ್ಟಡಗಳ ಸುತ್ತಲಿನ ಕಟ್ಟಡಗಳನ್ನು ಕೂಡ ಮುಂಜಾಗೃತಾ ಕ್ರಮವಾಗಿ ಖಾಲಿ ಮಾಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.