ಫಿನ್‌ಲ್ಯಾಂಡ್:
ಭಾರತದ ಸಿನಿಮಾಗಳಲ್ಲಿ ಒಂದು ದಿನದ ಮುಖ್ಯಮಂತ್ರಿ ಎನ್ನುವ ಕಾಂಸೆಪ್ಟ್ ಅನ್ನು ಎಕ್ಸ್ಪೆರಿಮೆಂಟ್ ರೀತಿ ತೋರಿಸಿದ್ದರು ಆದರೆ ಫಿನ್‌ಲ್ಯಾಂಡ್ ನಲ್ಲಿ ಇದರ ಪ್ರಾಕ್ಟಿಕಲ್ ನಡೆದಿದೆ. ಆ ದೇಶದಲ್ಲಿ ಬಾಲಕಿಯರ ಹಕ್ಕುಗಳನ್ನು ಉತ್ತೇಜಿಸುವ ಅಭಿಯಾನದ ಭಾಗವಾಗಿ ಫಿನ್ನಿಷ್ ಪ್ರಧಾನಿ 16 ವರ್ಷದ ಬಾಲಕಿಗೆ ಒಂದು ದಿನದ ಮಟ್ಟಿಗೆ ತನ್ನ ಅಧಿಕಾರವನ್ನು ಹಸ್ತಾಂತರಿಸಿದ್ದರು.
ದಕ್ಷಿಣ ಫಿನ್‌ಲ್ಯಾಂಡ್‌ನ ವಾಸ್ಕಿಯ ಆವಾ ಮುರ್ಟೊ ಈ ರೋಮಾಂಚಕಾರಿ ಅವಕಾಶ ಪಡೆದಿದ್ದರು. ಆವಾ ಹವಾಮಾನ ಬದಲಾವಣೆಗಳು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಕ್ರಿಯ ಪ್ರಚಾರಕರಾಗಿದ್ದಾರೆ. ಅವರು ಅಭಿವೃದ್ಧಿ ಮತ್ತು ವಿದೇಶಿ ವ್ಯಾಪಾರ ವಿಚಾರದಲ್ಲಿ ಹಲವು ಸಂಸದರು ಮತ್ತು ಸಚಿವರೊಂದಿಗೆ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ