ಗುಂಪು ಘರ್ಷಣೆ : 24 ಮಂದಿ ಬಲಿ..!!

ಪಪವಾ ನ್ಯೂ ಗುನಿಯಾ:

      ಅರಾಜಕ ಹೈಲ್ಯಾಂಡ್‌ ಪ್ರದೇಶದಲ್ಲಿ ಎರಡು ಬುಡಕಟ್ಟು ಗುಂಪುಗಳ ನಡುವೆ ನಡೆದ ಕಾಳಗದಲ್ಲಿ ಇಬ್ಬರು ಗರ್ಭಿಣಿಯರು ಸೇರಿದಂತೆ 24 ಮಂದಿ ಮೃತರರಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ಅಮಾನವೀಯ ಘಟನೆಗೆ ಆ ದೇಶದ ಪ್ರಧಾನಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದು ಕ್ಷಿಪ್ರವಾಗಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.

      ಅತ್ಯಂತ ದುರ್ಗಮ ಪಶ್ಚಿಮ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸಾಗುತ್ತಿದ್ದ ಬುಡಕಟ್ಟು ಗುಂಪು ಕಾಳಗಕ್ಕೆ 24 ಮಂದಿ ಬಲಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

      ನ್ಯೂಗಿನಿಯಾದಲ್ಲಿ ಕಳೆದ ಹಲವು ಶತಮಾನಗಳಿಂದ ಈ ಬುಡಕಟ್ಟು ಗುಂಪುಗಳ ನಡುವೆ ಸಂಘರ್ಷ, ಕಾಳಗ ನಡೆಯುವುದು ಸಾಮಾನ್ಯವಾಗಿದೆ. ವಿಶೇಷವೆಂದರೆ ಈ ಬುಡಕಟ್ಟು ಜನರಿಗೆ ಹೇರಳ ಪ್ರಮಾಣದಲ್ಲಿ ಅತ್ಯಾಧುನಿಕ ಆಟೋಮ್ಯಾಟಿಕ್‌ ಶಸ್ತ್ರಾಸ್ತ್ರಗಳು ಸಿಗುತ್ತಿರುವುದರಿಂದ ಪ್ರತೀ ಬಾರಿ ಸಂಘರ್ಷ, ಕಾಳಗ ಸ್ಫೋಟಗೊಂಡಾಗ ಅತ್ಯಧಿಕ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸುವುದು ಈಚೆಗೆ ಸಾಮಾನ್ಯವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap