ವೈಮಾನಿಕ ದಾಳಿ: ಮೂವರು ಐಎಸ್ ಉಗ್ರರು ಬಲಿ

ಬಾಗ್ದಾದ್

   ಅಮೆರಿಕ ನೇತೃತ್ವದ ಮಿತ್ರ ಪಡೆ ಇರಾಕ್‌ನ ಉತ್ತರ ಪ್ರಾಂತ್ಯದ ಕಿರ್ಕುಕ್‌ನಲ್ಲಿ ಶನಿವಾರ ಐಎಸ್ ಅಡಗುತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಐಎಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇರಾಕ್‌ ಸೇನೆ ತಿಳಿಸಿದೆ.

     ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಅಮೆರಿಕ ನೇತೃತ್ವದ ಪಡೆ, ಬಾಗ್ದಾದ್‌ನ 250 ಕಿ.ಮೀ.ದೂರದ ನೈರುತ್ಯ ಕಿರ್ಕುಕ್‌ನ ವಾಡಿ ಅಲ್ ಕರ್ಹಾ ಎಂಬಲ್ಲಿ ಐಎಸ್ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿತು ಎಂದು ಜಂಟಿ ಕಾರ್ಯಾಚರಣಾ ಕಮಾಂಡ್‌ನ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.ಈ ದಾಳಿಯಲ್ಲಿ ಮೂವರು ಐಎಸ್‌ ಉಗ್ರರು ಸಾವನ್ನಪ್ಪಿದ್ದು, ಅವರ ಅಡಗುತಾಣಗಳು ಧ್ವಂಸಗೊಂಡಿವೆ ಎಂದು ಹೇಳಿಕೆ ತಿಳಿಸಿದೆ.

    2017ರ ಕೊನೆಯ ಭಾಗದಲ್ಲಿ ದೇಶದಲ್ಲಿ ಐಎಸ್ ಉಗ್ರರನ್ನು ಇರಾಕ್ ಭದ್ರತಾ ಪಡೆ ಸಂಪೂರ್ಣವಾಗಿ ಸದೆಬಡಿದಿರು ವುದರಿಂದ ದೇಶದಲ್ಲಿ ಭದ್ರತಾ ಪರಿಸ್ಥಿತಿ ಇತ್ತೀಚೆಗೆ ಸುಧಾರಣೆ ಕಂಡಿದೆ.ಆದಾಗ್ಯೂ ಐಎಸ್ ಉಗ್ರರು ನಗರ ಪ್ರದೇಶದಲ್ಲಿ ಕಡಿಮೆಯಾಗಿದ್ದರೂ, ಹೊರ ವಲಯ ಮತ್ತು ಅರಣ್ಯ ಪ್ರದೇಶಗಳಲ್ಲಿ ತಮ್ಮ ಅಡಗುತಾಣಗಳನ್ನು ಸ್ಥಾಪಿಸಿಕೊಂಡು ಆಗಾಗ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ಗೆರಿಲ್ಲಾ ದಾಳಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link