ಸ್ಟಾಕ್ ಹೋಂ
ಭೌತಶಾಸ್ತ್ರದಲ್ಲಿ ನಡೆಸಿದ ವಿಶೇಷ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳಿಗೆ 2019ನೇ ಸಾಲಿನ ನೊಬೆಲ್ ಪುರಸ್ಕಾರ ಪ್ರಕಟಿಸಲಾಗಿದೆ.
ಭೌತಶಾಸ್ತ್ರ ವಿಜ್ಞಾನಿಗಳಾದ ಜೇಮ್ಸ್ ಪೀಬಲ್ಸ್, ಮೈಕೆಲ್ ಮೆಯೆರ್ ಮತ್ತು ಡಿಡಿಯರ್ ಕೌಲೌಜ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡುವುದಾಗಿ ನೊಬೆಲ್ ಅಸೆಂಬ್ಲಿ ಮಂಗಳವಾರ ಪ್ರಕಟಿಸಿದೆ.ಜಂಟಿಯಾಗಿ ನೊಬೆಲ್ ಪಡೆದುಕೊಂಡಿರುವ ಜೇಮ್ಸ್ ಪೀಬಲ್ಸ್, ಮೈಕೆಲ್ ಮೆಯೆರ್ ಮತ್ತು ಡಿಡಿಯರ್ ಕ್ಯೂಲೋಜ್ ಪೈಕಿ ಪೀಬಲ್ಸ್ ಕೆನಡಾ- ಅಮೇರಿಕ ಮೂಲದವರಾಗಿದ್ದು, ಮೈಕೆಲ್ ಮತ್ತು ಕ್ಯೂಲೋಜ್ ಸ್ವಿಟ್ಜರ್ಲೆಂಡ್ ಮೂಲದವರು. ವಿಶ್ವ ಸೃಷ್ಟಿಯಲ್ಲಿ ಸೈದ್ಧಾಂತಿಕ ಆವಿಷ್ಕಾರಗಳಿಗಾಗಿ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
9.18 ಮಿಲಿಯನ್ ಅಮೆರಿನ್ ಡಾಲರ್ ರಷ್ಟು ಬಹುಮಾನದ ಅರ್ಧದಷ್ಟು ಹಣ ಪೀಬಲ್ಸ್‌ಗೆ ಹೋಗಲಿದ್ದು, ಉಳಿದ ಭಾಗವನ್ನು ಮೈಕೆಲ್ ಮತ್ತು ಕೈಲೋಜ್ ಹಂಚಿಕೊಳ್ಳುತ್ತಾರೆ. ಡಿಸೆಂಬರ್ 10 ರಂದು ಸ್ಟಾಕ್ ಹೋಂ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ನೊಬೆಲ್ ಪ್ರಶಸ್ತಿ ವೈದ್ಯಕೀಯ ಕ್ಷೇತ್ರ ನೊಬೆಲ್ ಪುರಸ್ಕೃತರನ್ನು ಸೋಮವಾರ ಪ್ರಕಟಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
