ವೈಮಾನಿಕ ದಾಳಿ : ಹುತಾತ್ಮರಾದ 34 ಸೈನಿಕರು…!

ಡಮಾಸ್ಕಸ್

     ಟರ್ಕಿ ಮೇಲೆ ಸಿರಿಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಟರ್ಕಿಯ 34 ಸೈನಿಕರು ಸಾವನ್ನಪ್ಪಿದ್ದು ಸಿರಿಯಾದ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಮೇಲೆ ಸಿರಿಯಾ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ ಕನಿಷ್ಛ 34 ಟರ್ಕಿ ಸೈನಿಕರು ಸಾವನ್ನಪ್ಪಿರುವುದಾಗಿ ಯುದ್ಧ ಮಾನಿಟರ್ ವರದಿ ಮಾಡಿದೆ.

ಟರ್ಕಿ ಗಡಿಯಲ್ಲಿ ಸಿರಿಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಟ 34 ಮಂದಿ ಟರ್ಕಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ದಾಳಿಗೆ ಕಾರಣ ಇದಾಗಿರಬಹುದು: ಇಡ್ಲಿಬ್‌ನಲ್ಲಿನ ಬಂಡುಕೋರರಿಗೆ ಟರ್ಕಿ ಸೇನೆ ವಿಮಾನ ನಿಗ್ರಹ ಮೊಬೈಲ್ ರಾಕೆಟ್ ಲಾಂಚರ್ ಗಳನ್ನು ನೀಡುತ್ತಿದೆ ಎಂಬ ರಷ್ಯಾದ ಗಂಭೀರ ಆರೋಪದ ಮೇರೆಗೆ ಸಿರಿಯಾ ಸೇನೆ ಈ ವಾಯುದಾಳಿ ನಡೆಸಿದೆ ಎನ್ನಲಾಗಿದೆ. ಪ್ರಸ್ತುತ ಸಿರಿಯಾ ಮತ್ತು ಟರ್ಕಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಲೆಸಿದ್ದು, ಟರ್ಕಿ ಸೇನೆ ಕೂಡ ತಿರುಗೇಟು ನೀಡುವ ಎಚ್ಚರಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link