ಬೀಜಿಂಗ್:

ಕೈಗಾರಿಕಾ ಪಾರ್ಕ್ ನ ಜಿಯಾಂಗ್ಸು ಪ್ರಾಂತ್ಯದಲ್ಲಿ ಇರುವ ರಾಸಾಯನಿಕ ಘಟಕದಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು ಈ ಸ್ಪೋಟದಲ್ಲಿ ಸುಮಾರು 44 ಜನ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.
ಯೆಂಚೆಂಗ್ ರಾಸಾಯನಿಕ ಕೈಗಾರಿಕಾ ಪಾರ್ಕ್ ನ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸ್ಫೋಟ ಉಂಟಾಗಿದ್ದು ಈ ದುರ್ಘಟನೆಯಲ್ಲಿ 44 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.ಮೃತರ ಸಂಖ್ಯೆ 44ಕ್ಕೇರಿದೆ ಎಂದು ಚೀನಾ ಡೈಲಿ ವರದಿ ತಿಳಿಸಿದೆ. ದುರ್ಘಟನೆ ಸ್ಥಳದಿಂದ ಸುಮಾರು 88 ಮಂದಿಯನ್ನು ರಕ್ಷಿಸಲಾಗಿದೆ ಎಂದು ತುರ್ತು ವ್ಯವಸ್ಥಾಪನಾ ಸಚಿವಾಲಯ ತಿಳಿಸಿದೆ.
ಸ್ಫೋಟವಾದ ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಹಾಕಿಕೊಂಡಿದ್ದಾರೆ. ಸ್ಪೋಟದಿಂದ ಸುತ್ತಮುತ್ತಲ ಕಟ್ಟಡಗಳಿಗೂ ಸಹ ಹಾನಿಯಾಗಿದೆ. ರಕ್ಷಣಾ ಕಾರ್ಯಚರಣೆಗೆ 176 ಅಗ್ನಿಶಾಮಕ ಟ್ರಕ್ ಗಳು ಮತ್ತು 928 ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ ಎಂದು ತುರ್ತು ನಿರ್ವಹಣೆ ಸಚಿವಾಲಯ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
