ಕೊರೊನಾ ವೈರಸ್ : 560ಕ್ಕೆ ಏರಿದ ಸಾವಿನ ಸಂಖ್ಯೆ

ಬೀಜಿಂಗ್ :

    ಮಹಾಂಮಾರಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆ 560ಕ್ಕ ಏರಿದೆ ಇನ್ನು ಈ ಸೋಂಕು ಸುಮಾರು 28,018 ಜನರಿಗೆ ತಗುಲಿದೆ ಎಂದು ಚೀನಾದ ರಾಜ್ಯ ಆರೋಗ್ಯ ಸಮಿತಿ ಗುರುವಾರ ವರದಿ ಮಾಡಿದೆ.

    ಇಲ್ಲಿಯವರೆಗೆ 1153 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಫೆ. 5ರ ಮಧ್ಯರಾತ್ರಿಯವರೆಗೆ ದೇಶದ 31 ಪ್ರಾಂತ್ಯಗಳಲ್ಲಿ ಸುಮಾರು 28018 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 3859 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

    ಕೊರೋನಾ ವೈರಸ್ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲು ಚೀನಾ ಸಾಕಷ್ಟು ವ್ಯವಸ್ಥೆಗಳನ್ನುು ಮಾಡಿದೆ. ಸಾರ್ವಜನಿಕ ಕಟ್ಟಡಗಳನ್ನೇ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಳಗಳನ್ನಾಗಿ ಮಾರ್ಪಡಿಸಿಕೊಂಡಿದೆ. ಆದರೂ,  ದಿನದಿಂದ ದಿನಕ್ಕೆ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆಗಳಲ್ಲೂ ಕೊರತೆಗಳು ಕಂಡು ಬರುತ್ತಿದೆ.  ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ರೋಗಿಗಳು ಪರದಾಡುವಂತೆ ಸ್ಥಿತಿ ಎದುರಾಗಿದೆ. ಇದಲ್ಲದೆ, ಚಿಕಿತ್ಸೆ ನೀಡಲು ಅಗತ್ಯವಿರುವ ವಸ್ತುಗಳ ಕೊರತೆಗಳೂ ಕೂಡ ಎದುರಾಗುತ್ತಿವೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap