ವಿಶ್ವ ಸಂಸ್ಥೆ ವಿರುದ್ಧ ತನಿಖೆಗೆ 63 ರಾಷ್ಟ್ರಗಳ ಒತ್ತಾಯ..!

ಜಿನಿವಾ:

     ವಿಶ್ವದಾದ್ಯಂತ ತನ್ನ ರಾಕ್ಷಸ ದಾಳಿ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸದಂತೆ ವಿಶ್ವ ಆರೋಗ್ಯ ಸಂಸ್ಥೆ ನಡೆದುಕೊಂಡ ರೀತಿ ಮತ್ತು ಅದರ ಕ್ರಮಗಳ ಕುರಿತಂತೆ ಸಂಶಯ ವ್ಯಕ್ತಪಡಿಸಿರುವ ವಿಶ್ವದ 62 ರಾಷ್ಟ್ರಗಳು ತನಿಖೆಗೆ ಒತ್ತಾಯಿಸಿ ಸಹಿ ಹಾಕಿವೆ.

    ಕೊರೋನಾ ವೈರಸ್ ಅಥವಾ ಕೋವಿಡ್–19 ವೈರಸ್ ಹರಡುವುದನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಯಬೇಕು ಎಂಬ ಒತ್ತಾಯಕ್ಕೆ ಭಾರತ ಸೇರಿದಂತೆ 62 ದೇಶಗಳು ಬೆಂಬಲ ಸೂಚಿಸಿವೆ. ಇಂದಿನಿಂದ ಆರಂಭವಾಗಲಿರುವ 73ನೇ  ವಿಶ್ವ ಆರೋಗ್ಯ ಸಮಾವೇಶದ (ಡಬ್ಲ್ಯುಎಚ್‌ಎ) ಸಭೆಗೆ ಪ್ರಸ್ತಾಪಿಸಲಾದ ಕರಡು ನಿರ್ಣಯದಲ್ಲಿ ಈ ಮಾಹಿತಿ ಇದ್ದು, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಕ್ರಮಗಳು ಮತ್ತು ಮಾರ್ಗಸೂಚಿಗಳ ಕುರಿತು ತನಿಖೆ ನಡೆಸುವುದಲ್ಲದೆ, ಕೊರೋನಾ  ವೈರಸ್ ಬಿಕ್ಕಟ್ಟಿನ ಬಗ್ಗೆ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಕರಡಿನಲ್ಲಿ ಒತ್ತಾಯಿಸಲಾಗಿದೆ. ಐರೋಪ್ಯ ಒಕ್ಕೂಟದ ದೇಶಗಳ ಹೊರತಾಗಿ ಜಪಾನ್, ಬ್ರಿಟನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಕೆನಡಾಗಳು ಕರಡನ್ನು ಬೆಂಬಲಿಸಿವೆ.

     ಕೊರೋನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆಯ ಸಂಘಟಿತ ಅಂತಾರಾಷ್ಟ್ರೀಯ ಆರೋಗ್ಯ ಪ್ರತಿಕ್ರಿಯೆಯಿಂದ ಪಡೆದ ಅನುಭವ ಮತ್ತು ಪಾಠಗಳನ್ನು ಪರಿಶೀಲಿಸಲು, ಸೂಕ್ತ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚಿಸಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು  ಬಳಸುವುದು ಸೇರಿದಂತೆ, ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ವಿವಿಧ ರಾಷ್ಟ್ರಗಳು ಕರಡಿನಲ್ಲಿ ಒತ್ತಾಯಿಸಿವೆ.

 

    ಇನ್ನು ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್–19ಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಗೆ ನಡೆಸಲು ಒತ್ತಾಯಿಸುತ್ತಿರುವ ಐರೋಪ್ಯ ದೇಶಗಳು ಮತ್ತು ಆಸ್ಟ್ರೇಲಿಯಾ ದೇಶಗಳು ಇತರ ರಾಷ್ಟ್ರಗಳ ಬೆಂಬಲವನ್ನೂ ಯಾಚಿಸುತ್ತಿವೆ.  

      ಆಸ್ಟ್ರೇಲಿಯಾದ ವಿದೇಶಾಂಗ ಸಚಿವರಾದ ಮರಿಸೆ ಪೇನ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಬಿಕ್ಕಟ್ಟಿನ ಕುರಿತು ತನಿಖೆ ನಡೆಸಲು ಏಕಾಏಕಿ ಡಬ್ಲ್ಯುಎಚ್‌ಒಗೆ ಅವಕಾಶ ನೀಡುವುದು ‘ನಮ್ಮನ್ನೇ ಕಳ್ಳ ಬೇಟೆಗಾರ ಮತ್ತು ಗೇಮ್‌ಕೀಪರ್ ಆಗಿ ನೋಡುವಂತೆ ಮಾಡುತ್ತದೆ. ಅಲ್ಲದೆ ಇದು ಮುಂದೆ  ಎದುರಾಗಬಹುದಾದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಥವಾ ಎದುರಿಸಲು ಮತ್ತು ನಮ್ಮ ನಾಗರಿಕರನ್ನು ಸುರಕ್ಷಿತವಾಗಿಡಲು ಅಂತರರಾಷ್ಟ್ರೀಯ ಸಮುದಾಯವನ್ನು ಸಜ್ಜುಗೊಳಿಸಲು ಸಹಕಾರಿಯಾಗುತ್ತದೆ’ ಎಂದು ಹೇಳಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap