ಸಿರಿಯಾ: ಅಮೇರಿಕ ದಾಳಿಗೆ 7 ಅಲ್-ಖೈದಾ ಉಗ್ರರು ಫಿನಿಶ್…!

ವಾಷಿಂಗ್ಟನ್

    ಉಗ್ರಗಾಮಿಗಳ ಹಾವಳಿ ಮತ್ತು ಹಿಂಸಾಚಾರದಿಂದ ನಲುಗಿರುವ ಸಿರಿಯಾದಲ್ಲಿ ಅಮೆರಿಕಾ ಸೇನಾಪಡೆಗಳು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದನೆ ಸಂಘಟನೆ ಅಲ್-ಖೈದಾ (ಎಕ್ಯೂ-ಎಸ್)ದ 7 ಹಿರಿಯ ಉಗ್ರ ನಾಯಕರು ಹತರಾಗಿದ್ದಾರೆ.

   ಅಮೆರಿಕಾದ ರಾಜಧಾನಿ ವಾಷಿಂಗ್ಟನ್‍ನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಯುಎಸ್ ಸೆಂಟ್ರಲ್ ಕಮಾಂಡರ್‍ನ ವಕ್ತಾರೆ ಮೇಜರ್ ಬೆತ್ ರೋಹಿರ್‍ಡಾನ್ ಸಿರಿಯಾದ ಉತ್ತರ ಭಾಗದ ಇದ್ಲೀಬ್ ಪ್ರದೇಶದಲ್ಲಿ ನಡೆಸಿದ ಅಮೆರಿಕ ವಾಯು ದಾಳಿಯಲ್ಲಿ 7 ಕುಖ್ಯಾತ ನಾಯಕರು ಹತರಾಗಿದ್ದಾರೆ ಎಂದು ತಿಳಿಸಿದರು.

    ಅಲ್-ಖೈದಾ ಉಗ್ರಗ್ರಾಮಿ ಸಂಘಟನೆಯ ಹತರಾದ 7 ನಾಯಕರ ಹೆಸರನ್ನು ತಿಳಿಸಲು ಅವರು ನಿರಾಕರಿಸಿದ್ದಾರೆ. ಸಿರಿಯಾದಲ್ಲಿ ದಾಳಿ ನಡೆಸಲು ಎಕ್ಯೂ-ಎಸ್ ನಾಯಕರ ಸಭೆ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ನಮ್ಮ ಫೈಟರ್ ಜೆಟ್‍ಗಳು ನಡೆಸಿದ ದಾಳಿಯಲ್ಲಿ ಭಯೋತ್ಪಾದನೆ ಸಂಘಟನೆಯ 7 ನಾಯಕರು ಹತರಾದರು. ಈ ದಾಳಿಯಲ್ಲಿ ಇನ್ನೂ ಕೆಲವರಿಗೆ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೇಜರ್ ಬೆತ್ ತಿಳಿಸಿದ್ದಾರೆ.

    ಅಸ್ಥಿರಗೊಂಡಿರುವ ಸಿರಿಯಾದ ಉತ್ತರ ಭಾಗದಲ್ಲಿ ಪ್ರಾಬಲ್ಯ ಸಾಧಿಸಿ ಅಮೆರಿಕ ಸೇನಾ ಪಡೆಗಳು ಮತ್ತು ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಲು ಈ ಉಗ್ರರು ಸಜ್ಜಾಗಿದ್ದರು. ನಮ್ಮ ಕ್ಷಿಪ್ರ ಕಾರ್ಯಾಚರಣೆಯಿಂದ ಎಕ್ಯೂ-ಎಸ್ ಸಂಘಟನೆಗೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.ಸಿರಿಯಾದಲ್ಲಿ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಅಮೆರಿಕ ತನ್ನ ಮಿತ್ರ ದೇಶಗಳ ಸಹಕಾರದೊಂದಿಗೆ ನಿಗ್ರಹಿಸುವ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap