ನೆಲಬಾಂಬ್ ಸ್ಫೋಟ : ಏಳು ಮಕ್ಕಳು ಬಲಿ..!!

ಡಮಾಸ್ಕಸ್

     ಪೂರ್ವ ಸಿರಿಯಾದಲ್ಲಿ ಮಂಗಳವಾರ ನೆಲಬಾಂಬ್ ಸ್ಫೋಟದಲ್ಲಿ ಕನಿಷ್ಠ ಏಳು ಮಕ್ಕಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಡೇರ್ – ಅಲ್‌ ಜೌರ್‌ ಪೂರ್ವ ಪ್ರಾಂತ್ಯದ ದಬ್ಲಾನ್ ನಲ್ಲಿ ನೆಲ ಬಾಂಬ್ ಸ್ಫೋಟಿಸಿದೆ ಎಂದು ವರದಿಯಾಗಿದೆ.

    ಕಳೆದ ವರ್ಷ ಇಸ್ಲಾಮಿಸ್ ಸ್ಟೇಟ್ ಉಗ್ರರ ಹಿಡಿತದಲ್ಲಿದ್ದ ಸಂದರ್ಭದಲ್ಲಿ ಅವರು ಹುದುಗಿಸಿಟ್ಟಿದ್ದ ಬಾಂಬ್ ಈಗ ಸ್ಫೋಟಿಸಿದೆ ಎನ್ನಕಾಗಿದೆ.ನೆಲಬಾಂಬ್ ಸ್ಫೋಟಕ್ಕೆ ನೂರಾರು ಜನರು ಬಲಿಯಾಗಿದ್ದು ನಾಗರಿಕರ ಸುರಕ್ಷತೆಗಾಗಿ ಹುದುಗಿಸಿಟ್ಟಿರುವ ಬಾಂಬ್‌ ಗಳನ್ನು ಪತ್ತೆ ಮಾಡಿ ಅವುಗಳನ್ನು ನಿಷ್ಕ್ರಿಯಗೊಳಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.ಕಳೆದ ಏಪ್ರಿಲ್ 11 ರಂದು ದಕ್ಷಿಣ ಸಿರಿಯಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಮಕ್ಕಳು ಮೃತಪಟ್ಟು ಓರ್ವ ವ್ಯಕ್ತಗೆ ಗಾಯಗಳಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ