ಹೆಲಿಕಾಪ್ಟರ್ ದುರಂತ: ಕಲ್ಲಿದ್ದಲು ಉದ್ಯಮಿ ಸೇರಿ 7 ಮಂದಿ ಸಾವು

ಮಾಸ್ಕೋ

    ಬಹಮಾಸ್‍ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅಮೆರಿಕ ಕಲ್ಲಿದ್ದಲು ಉದ್ಯಮಿ ಹಾಗೂ ಕೋಟ್ಯಧಿಪತಿ ಕ್ರಿಸ್ಟೋಫರ್ ಕ್ಲೈನ್ ​​ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಬಹಮಾಸ್‌ನ ಬಿಗ್ ಗ್ರ್ಯಾಂಡ್ ಕೇ ದ್ವೀಪದಿಂದ ಹೊರಟ ಹೆಲಿಕಾಪ್ಟರ್, ತಾನು ತಲುಪಬೇಕಿದ್ದ ಫ್ಲೋರಿಡಾಗೆ ಆಗಮಿಸದಿರು ವುದು ರಾಯಲ್ ಬಹಮಾಸ್ ಪೊಲೀಸ್ ಪಡೆ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 2.53ಕ್ಕೆ ಗಮನಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಎನ್‌ಒ ತಿಳಿಸಿದೆ.

    ಮೂರು ತಾಸಿನ ಶೋಧದ ನಂತರ ಹೆಲಿಕಾಪ್ಟರ್ ಅನ್ನು ಅಟ್ಲಾಂಟಿಕ್‍ ಸಾಗರದ ಆಳವಿಲ್ಲದ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ.

    ‘ನಾಲ್ವರು ಮಹಿಳೆಯರು ಮತ್ತು ಮೂವರು ಪುರುಷರ ಮೃತದೇಹಗಳನ್ನು ಹೆಲಿಕಾಪ್ಟರ್ ನಿಂದ ಹೊರತೆಗೆಯಲಾಗಿದೆ.’ ಎಂದು ಪೊಲೀಸ್ ವಕ್ತಾರ ಟೆರೆಸಿಟಾ ಪಿಂಡರ್ ಅವರನ್ನು ಉಲ್ಲೇಖಿಸಿ ಮಧ್ಯಮ ತಿಳಿಸಿದೆ. ನತದೃಷ್ಟರ ಪೈಕಿ ಒಬ್ಬರನ್ನು ಅಮೆರಿಕ ಕಲ್ಲಿದ್ದಲು ಉದ್ಯಮಿ ಕ್ರಿಸ್ಟೋಫರ್ ಕ್ಲೈನ್ ​​ಎಂದು ಗುರುತಿಸಲಾಗಿದ್ದು, ಉದ್ಯಮಿಯ ಪುತ್ರಿ ಸಹ ಹೆಲಿಕಾಪ್ಟರ್‌ನಲ್ಲಿದ್ದರು ಎಂದು ರಿಜಿಸ್ಟಾರ್-ಹೆರಾಲ್ಡ್ ಪತ್ರಿಕೆ ತಿಳಿಸಿದೆ.

      ದುರಂತದಲ್ಲಿ ಮೃತಪಟ್ಟ ಇತರ ಐವರ ಗುರುತು ತಕ್ಷಣ ತಿಳಿದುಬಂದಿಲ್ಲ. ಆದರೆ ಇವರೆಲ್ಲರೂ ಪ್ರಜೆಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ