ಟಕ್ಸನ್ :

ಮೆಕ್ಸಿಕೋ ಗಡಿಯಲ್ಲಿ ಸುಮಾರು ಏಳು ವರ್ಷ ವಯಸ್ಸಿನ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಲ್ಯೂಕೆವಿಲ್ಲೆ ನಗರದಿಂದ ಪಶ್ಚಿಮಕ್ಕೆ 17 ಮೈಲಿ ದೂರದಲ್ಲಿ ಗಡಿ ಗಸ್ತು ಪಡೆ ಬುಧವಾರ ಬೆಳಗ್ಗೆ ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದೆ.
ನಾಲ್ಕು ಜನರೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬಿಟ್ಟಿದ್ದಾರೆ. ಟಕ್ಸನ್ ವಲಯದ ಗಡಿ ಬದ್ರತಾ ಪಡೆಯೂ ಭಾರತದಿಂದ ಬಂದಿದ್ದ ಇಬ್ಬರು ಮಹಿಳೆಯರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದು, ತದನಂತರ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಪ್ರತ್ಯೇಕಿಸಲಾಗಿತ್ತು ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಡಿಯ ದಕ್ಷಿಣ ಭಾಗದಲ್ಲಿ ಒಂದು ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಇತರ ವಲಸಿಗರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನಿಬ್ಬರು ಬುಧವಾರ ತಡರಾತ್ರಿ ಮೆಕ್ಸಿಕೋಗೆ ಮರಳಿರುವ ಬಗ್ಗೆ ಗಡಿ ಗಸ್ತು ಪಡೆ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
