ಸಂಚಲನಾತ್ಮಕ ನಿರ್ಧಾರ ತೆಗೆದುಕೊಳ್ಳಲು ಮುಂದಾದ ಕುವೈತ್ ಸರ್ಕಾರ..!

8 ಲಕ್ಷ ಭಾರತೀಯರು ಆ ದೇಶ ಬಿಡುವ ಪರಿಸ್ಥಿತಿ

ಕುವೈತ್:

     ವಿದೇಶದಿಂದ ಬಂದಿರುವರ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕುವೈಟ್ ಜಾರಿಗೊಳಿಸಲು ಉದ್ದೇಶಿಸಿರುವ ಎಕ್ಸ್ ಪಾಟ್ ಕೋಟಾ ಮಸೂದೆ ಕನಿಷ್ಟ 8 ಲಕ್ಷ ಭಾರತೀಯರು ಆ ದೇಶ ಬಿಡುವ ಪರಿಸ್ಥಿತಿ ತಂದೊಡ್ಡಲಿದೆ.ಕುವೈಟ್ ನ ರಾಷ್ಟ್ರೀಯ ಅಸೆಂಬ್ಲಿಯ ಲೀಗಲ್ ಹಾಗೂ ಲೆಜಿಸ್ಲೇಟೀವ್ ಸಮಿತಿಗೆ ಡ್ರಾಫ್ಟ್ ಎಕ್ಸ್ಪಾಟ್ ಕೋಟಾ ಬಿಲ್ ನ್ನು ಕಳಿಸಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಪ್ರಕಟಿಸಿದೆ.

    ದೇಶದ ಒಟ್ಟಾರೆ ಜನಸಂಖ್ಯೆಯ ಶೇ.15 ಕ್ಕಿಂತ ಹೆಚ್ಚು ಭಾರತೀಯರು ಇರಬಾರದು ಎಂಬ ಅಂಶವನ್ನು ಈ ಕಾನೂನಲ್ಲಿ ಜಾರಿಗೆ ತರಲಾಗುತ್ತದೆ. ಪರಿಣಾಮವಾಗಿ ಕುವೈಟ್ ನಲ್ಲಿ ಒಟ್ಟಾರೆ ಇರುವ ವಿದೇಶಿಗರ ಪೈಕಿ ಅತಿ ಹೆಚ್ಚಾಗಿರುವ 1.45 ಮಿಲಿಯನ್ ನಲ್ಲಿ 8 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಸ್ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ. 4.3 ಮಿಲಿಯನ್ ಒಟ್ಟಾರೆ ಜನಸಂಖ್ಯೆಯ ಪೈಕಿ 3 ಮಿಲಿಯನ್ ಜನರು ವಿದೇಶಿಗರಿದ್ದಾರೆ.

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುವೈಟ್ ನ ಶಾಸಕರು ವಿದೇಶಿಗರ ಸಂಖ್ಯೆಯನ್ನು ಇಳಿಕೆ ಮಾಡಲು ಈ ಕ್ರಮ ಕೈಗೊಂಡಿದ್ದಾರೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯ ಕುವೈಟ್ ನ ಪ್ರಕಾರ 49,000 ಕೋವಿಡ್-19 ಪ್ರಕರಣಗಳು ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap