ಇರಾನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೇರಿಕ..!!

ವಾಷಿಂಗ್ಟನ್‌ :

     ಇಷ್ಟು ದಿನ ಇರಾನ್ ನ ಕಚ್ಚಾ ತೈಲ ವಹಿವಾಟಿನ ಮೇಲೆ ನಿರ್ಭಂದ ಹೇರಿದ್ದ ಅಮೇರಿಕ ಈಗ ಇರಾನ್ ಗೆ ಖಡಕ್ ವಾರ್ನಿಂಗ್ ಸಹ ನೀಡಿದೆ ಇರಾನ್ ನಲ್ಲಿ ನೆಲೆಸಿರುವ ಅಮೆರಿಕ ಪ್ರಜೆಗಳ ಮೇಲೆ ಅಥವಾ ಅಮೆರಿಕದ ಯಾವುದೇ ಸೊತ್ತು-ಸೌಕರ್ಯಗಳ ಮೇಲೆ ಟೆಹರಾನ್‌ ಅಥವಾ ಅದರ ಯಾವುದೇ ಶಕ್ತಿಗಳು ದಾಳಿ ಮಾಡಿದರೆ  ಅತ್ಯಂತ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೇರಿಕಾ ತಿಳಿಸಿದೆ.

     ಮಧ್ಯಪೂರ್ವ ರಾಷ್ಟ್ರಗಳ ಮೇಲೆ ಇರಾನ್‌ ಯಾವುದೇ ರೀತಿಯ ಕೆಟ್ಟ ಪ್ರಭಾವ ಬೀರುವುದನ್ನು ತಡೆಯಲು ಮತ್ತು ಪರಮಾಣು ಅಸ್ತ್ರ ಮತ್ತು ಖಂಡಾಂತರ ಕ್ಷಿಪಣಿ ಹೊಂದುವುದನ್ನು ತಡೆಯುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನಿನ ಉಕ್ಕು, ಅಲ್ಯುಮಿನಿಯಂ ಮತ್ತು ತಾಮ್ರ ಕ್ಷೇತ್ರಗಳ ಮೇಲೆ ಅತ್ಯಂತ ಕಠಿನ ನಿಷೇಧಗಳನ್ನು ಹೇರಿದ್ದಾರೆ.

      ಇದಕ್ಕಾಗಿ ಅಮೆರಿಕದ ವಿರುದ್ದ ಮುಯ್ಯಿ ತೀರಿಸಿಕೊಳ್ಳಲು ಇರಾನ್‌ ವಿನಾಶಕ ಉಪಕ್ರಮಕ್ಕೆ ಕೈಹಾಕಿದರೆ ಅಮೆರಿಕ ಸುಮ್ಮನಿರುವುದಿಲ್ಲ ಇರಾನ್ ಮೇಲೆ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ಅಮೆರಿಕದ ವಿದೇಶ ಸಚಿವ ಮೈಕ್‌ ಪಾಂಪಿಯೋ ನೀಡಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ