ವಾಷಿಂಗ್ಟನ್
ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್’ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್’ಗೆ ಸೆಪ್ಟೆಂಬರ್ 15ರವರೆಗೂ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾರಾಟವಾಗದೇ ಹೋದಲ್ಲಿ, ಆ್ಯಪ್’ನ್ನು ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ. ಆ್ಯಪ್’ನ್ನು ಮೈಕ್ರೋಸಾಫ್ಟ್ ಅಥವಾ ಇತರೆ ಯಾವುದೇ ಸಂಸ್ಥೆ ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ದಿನದಿಂದ ದಿನಕ್ಕೆ ವಿಶ್ವದ ಒಂದೊಂದೇ ದೇಶಗಳು ಟಿಕ್ ಟಾಕ್ ಆ್ಯಪ್ ಗಳನ್ನು ನಿಷೇಧಿಸುತ್ತಿವೆ. ಅದರಲ್ಲೂ ಭಾರತ, ಅಮೆರಿಕಾ ಸೇರಿದಂತೆ ಪ್ರಮುಖ ದೇಶಗಳು ಟಿಕ್ ಟಾಕ್ ನಿಷೇಧಿಸುತ್ತಿರುವುದರಿಂದ ಚೀನಾ ರಾಷ್ಟ್ರಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ