ಕೊರೋನಾ ಹೊಡೆತಕ್ಕೆ ತತ್ತರಿಸಿದ ಅಮೇರಿಕ..!

ನ್ಯೂಯಾರ್ಕ್:

      ಜಾಗತಿಕವಾಗಿ ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕದಲ್ಲಿ ಕರೋನಾವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 22,000 ದಾಟಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,56,004 ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ- ಅಂಶಗಳು ತಿಳಿಸಿವೆ. ಅಮೆರಿಕದಲ್ಲಿ ನ್ಯೂಯಾರ್ಕ್ ಹೆಚ್ಚು ಭಾದಿತ ನಗರವಾಗಿದ್ದು, ಇಲ್ಲಿ 6,898 ಸಾವುಗಳು ವರದಿಯಾಗಿವೆ.

      ವಿಶ್ವವಿದ್ಯಾಲಯದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 2,805,892 ಜನರನ್ನು ಪರೀಕ್ಷಿಸಲಾಗಿದೆ.ಈ ಪೈಕಿ 461,601 ಪರೀಕ್ಷೆಗಳನ್ನು ನ್ಯೂಯಾರ್ಕ್‌ನಲ್ಲಿ ನಡೆಸಲಾಗಿದೆ. ಅಮೆರಿಕದಲ್ಲಿ ಈವರೆಗೆ ಒಟ್ಟು 32,988 ಜನರು ವೈರಾಣು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

    22,020 ಸಾವುಗಳೊಂದಿಗೆ ಅಮೆರಿಕ ವಿಶ್ವದ ಅತಿ ಹೆಚ್ಚು ಭಾದಿತ ದೇಶವಾಗಿದೆ. ಇಟಲಿ ಮತ್ತು ಸ್ಪೇನ್ ನಲ್ಲಿ ಸೋಂಕಿನಿಂದ ಕ್ರಮವಾಗಿ 19,899 ಮತ್ತು 17,209 ಸಾವುಗಳು ಸಂಭವಿಸಿವೆ.ಈ ಮಧ್ಯೆ, ಫ್ರಾನ್ಸ್ ನಲ್ಲಿ ಸಾವಿನ ಸಂಖ್ಯೆ 14,000 ದಾಟಿದ್ದು, 133,670 ಪ್ರಕರಣಗಳು ದೃಢಪಟ್ಟಿವೆ. ಮಾರಕ ಸೋಂಕಿಗೆ 657 ಜನರು ಬಲಿಯಾದ ನಂತರ ಬ್ರಿಟನ್‌ನಲ್ಲಿ ಕೊವಿದ್‍-19ರಿಂದ ಸಾವನ್ನಪ್ಪಿದವರ ಸಂಖ್ಯೆ 10,612 ಕ್ಕೆ ತಲುಪಿದೆ ಎಂದು ದೇಶದ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆ ಭಾನುವಾರ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link