ವಾಷಿಂಗ್ ಟನ್:
ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವ ಬೀರುತ್ತಾ ರಣ ಕೇಕೆ ಹಾಕುತ್ತಿರುವ ಕೊರೋನಾದ ಮೂಲ ಇಂದಿಗೂ ನಿಗೂಡವಾಗಿಯೇ ಉಳಿದಿದೆ ಇದು ಕೊರೋನಾ ವೈರಸ್ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆಯೋ ಅಥವಾ ಬೇರೆ ಮೂಲಗಳಿಂದ ಸೋರಿಕೆಯಾಗಿದಯೇ ಎಂಬುದರ ಜಾಡು ಹಿಡಿದು ತನಿಖೆ ನಡೆಸಲು ಅಮೇರಿಕ ಮುಂದಾಗಿದೆ ಎನ್ನಲಾಗಿದೆ .
ಕೊರೋನಾ ವೈರಸ್ ಸೃಷ್ಟಿಯಾಗಿದ್ದರ ರಹಸ್ಯವನ್ನು ಭೇದಿಸುವುದಕ್ಕಾಗಿ ತನಿಖೆ ನಡೆಸಲಾಗುತ್ತಿದೆ,ವಿಶ್ವ ಮಟ್ಟದಲ್ಲಿ ಸೃಷ್ಠಿಯಾಗಿರುವ ಭಯಾನಕ ಪರಿಸ್ಥಿತಿ ಯಾಕೆ ಮತ್ತು ಅದರ ಮೂಲದ ಹುಡುಕಾಟದಲ್ಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಾತನಾಡಿದ್ದು, ಕೊರೋನಾ ವಿಷಯದಲ್ಲಿ ಗೊತ್ತಿರುವ ಮಾಹಿತಿಯ ಕುರಿತು ಚೀನಾ ಪಾರದರ್ಶಕವಾಗಿರಬೇಕು ಎಂದು ತಾಕೀತು ಮಾಡಿದ್ದಾರೆ. ಚೀನಾದ ವಿದೇಶಾಂಗ ವ್ಯವಹಾರಗಳ ಉನ್ನತ ಅಧಿಕಾರಿಗೆ ಅಮೆರಿಕ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೋ ಚೀನಾ ಕೋವಿಡ್ ವಿಷಯದಲ್ಲಿ ಪಾರದರ್ಶಕವಾಗಿರಬೇಕು ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಸೋಂಕು ಸ್ಫೋಟಗಳನ್ನು ತಡೆಗಟ್ಟಲು ಚೀನಾ ಮಾಹಿತಿ ಹಂಚಿಕೊಳ್ಳಬೇಕೆಂದು ಹೇಳಿದ್ದರು.
ಅಮೆರಿಕ ನಡೆಗೆ ಚೀನಾ ಅಸಮಾಧಾನ ಹೊರಹಾಕಿದ್ದು, ತಾನು ಕೋವಿಡ್-19 ವಿಷಯದಲ್ಲಿ ಪಾರದರ್ಶಕವಾಗಿಯೇ ಇರುವುದಾಗಿ ಹೇಳಿದೆ. ಇನ್ನು ಅಮೆರಿಕಾಗೆ ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ನೇರವಾಗಿ ಕಾರ್ಯನಿರ್ವಹಣೆಗೆ ಅವಕಾಶ ನೀಡಿದರೆ ಜಾಗತಿಕ ಮಟ್ಟದಲ್ಲಿ ಜೀವಗಳನ್ನು ರಕ್ಷಿಸಬಹುದು ಎಂದು ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ಹೇಳಿದ್ದರು. ಈ ಹೇಳಿಕೆಗೆ ಚೀನಾ ಮತ್ತಷ್ಟು ಕೆರಳಿದ್ದು, ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವೆ ಮತ್ತೆ ಅಸಮಾಧಾನ ಭುಗಿಲೆದ್ದಿದೆ.
ಫಾಕ್ಸ್ ನ್ಯೂಸ್ ವರದಿಯ ಪ್ರಕಾರ ಚೀನಾದ ವೈರಾಲಜಿ ಪ್ರಯೋಗಾಲಯದಿಂದ ಕೊರೋನಾ ವೈರಸ್ ಹರಡಿದೆ. ಇದು ಜೈವಿಕ ಅಸ್ತ್ರವಲ್ಲ. ವೈರಸ್ ವಿರುದ್ಧ ಹೋರಾಡಲು ಅಮೆರಿಕಕ್ಕೆ ಸರಿಸಮಾನದ ಅಥವಾ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ತೋರಿಸಲು ಈ ವೈರಸ್ ಅಭಿವೃದ್ಧಿ ಪಡಿಸಿರಬಹುದು ಎಂದು ವರದಿ ಮಾಡಿತ್ತು.