ಕಡೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ ..!

ಇಸ್ಲಾಮಾಬಾದ್:

      ಸದಾ ನೆರೆಹೊರೆ ರಾಷ್ಟ್ರಗಳಿಗೆ ತೊಂದರೆ ಕೊಡುವ ಯೋಚನೆ ಮಾಡುವ ಪಾಕಿಸ್ತಾನ ಮಹತ್ತರ ಬೆಳವಣಿಗೆಯೊಂದರಲ್ಲಿ ಸತ್ಯವೊಂದನ್ನು ಒಪ್ಪಿಕೊಂಡಿದೆ.

     ಅದೇನೆಂದರೆ ಉಗ್ರರು ಅಮೆರಿಕಾದ ಸಿಐಎ ನೀಡುವ ಆರ್ಥಿಕ ನೆರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಯೋತ್ಪಾದಕರ ಮಾತೃಭೂಮಿಯಾದ ಪಾಕಿಸ್ತಾನ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ. 

     1980ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಯೋಧರ ವಿರುದ್ದ ಆಫ್ಘಾನಿಸ್ತಾನವನ್ನು ಎತ್ತಿಕಟ್ಟಿ ಅವರ ವಿರುದ್ಧ ಜಿಹಾದ್’ಗಾಗಿ ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ನೀಡಿದ ಆರ್ಥಿಕ ನೆರವನ್ನು ಬಳಸಿಕೊಂಡಿದ್ದ ಪಾಕಿಸ್ತಾನ ಮುಜಾಹಿದ್ದೀನ್ ಗಳಿಗೆ ತರಬೇತಿ ನೀಡಿ, ಸಜ್ಜುಗೊಳಿಸಿತ್ತು. 

    ಅಫ್ ಘಾನಿಸ್ತಾನದವರು ಮಾಡುತ್ತಿರುವುದು ಜಿಹಾದ್ ಅಲ್ಲ ಅದು ಕೇವಲ ಭಯೋತ್ಪಾದನೆ ಎಂದು ಪಾಕಿಸ್ತಾನ ಹೇಳುವಂತಾಗಿದೆ . ಆಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನ ಇದೂವರೆಗೂ 100 ಶತಕೋಟಿ ಡಾಲರ್ ಕಳೆದುಕೊಂಡಿತ್ತು. ಕೊನೆಯಲ್ಲಿ ಆಫ್ಘಾನಿಸ್ಥಾನದಲ್ಲಿನ ವೈಫಲ್ಯಕ್ಕೆ ಅಮೆರಿಕ ಪಾಕಿಸ್ಥಾನದ ಮೇಲೆ ಗೂಬೆ ಕೂರಿಸಿದೆ. ಇದು ಅನ್ಯಾಯಾದ ಪರಮಾವಧಿ ಎಂದು ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link