ಮತಪೆಟ್ಟಿಗೆ ಕದ್ದೊಯ್ದ ದುಷ್ಕರ್ಮಿಗಳು….!!

ಢಾಕಾ:  
        ಇಂದಿರಾ ಕೃಪೆಯಿಂದ ಹುಟ್ಟಿದ ಬಾಂಗ್ಲಾದೇಶದಲ್ಲಿ  ಈಗ ಸಂಸತ್ ಚುನಾವಣೆ ಚಾಲ್ತಿಯಲ್ಲಿದೆ,ಈ ಚುನಾವಣೆಯಲ್ಲಿ ಸುಮಾರು  104. 2 ಮಿಲಿಯನ್ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ.
          ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೂ ಮುಂದುವರೆಯಲಿದೆ ಎಂದು ಅಲ್ಲಿನ ಚುನಾವಣಾ ಆಯೋಗ ತಳಿಸಿವೆ. ಬಾಂಗ್ಲಾದೇಶದ ಹಾಲಿ ಪ್ರಧಾನಮಂತ್ರಿ ಶೇಖ್ ಹಸೀನಾ ಢಾಕಾದಲ್ಲಿನ  ಸಿಟಿ ಕಾಲೇಜಿನಲ್ಲಿ  ಮತ ಚಲಾಯಿಸಿದ್ದಾರೆ.
          ಮತದಾನದ ಸಂದರ್ಭದಲ್ಲಿ  ದುಷ್ಕರ್ಮಿಗಳು ಮತದಾನಕ್ಕಾಗಿ ವ್ಯವಸ್ಥೆ ಮಾಡಿದ್ದ ಎಲ್ಲಾ ಸಾದನ ಸಲಕರಣೆಗಳನ್ನು ಮತ್ತು ಮತ ಪೆಟ್ಟಿಗೆ ಗಳನನ್ನು  ಕಳವು ಮಾಡಿದ್ದಾರೆ  ಎಂದು ತಿಳಿದು ಬಂದಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಒಂದಾದ   ನೌಕಾಲಿ-3ರ ಮತಕೇಂದ್ರದಲ್ಲಿ  ಮತದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. 
           ಮತದಾನದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ  ದೇಶಾದ್ಯಂತ ಮೊಬೈಲ್  ಇಂಟರ್ ನೆಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ  ಸ್ಥಗಿತಗೊಳಿಸಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಮತ್ತೆ ಇಂಟರ್ ನೆಟ್  ವ್ಯವಸ್ಥೆಯನ್ನು  ಒದಗಿಸಲಾಗುವುದು ಸರ್ಕಾರ ಹೇಳಿದೆ. ಸರ್ಕಾರದ ಈ ನಿರ್ಧಾರ ಸುಮಾರು 8.60 ಕೋಟಿ ಜನರ ಮೇಲೆ ಪರಿಣಾಮ ಬೀರಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link