ಕಪ್ಪು ರಂದ್ರದ (BLACK HOLE) ಮೊದಲ ಚಿತ್ರ ಬಿಡುಗಡೆ

ವಾಷಿಂಗ್ಟನ್

       ವಿಜ್ಞಾನ ಕ್ಷೇತ್ರಕ್ಕೆ ಸವಾಲಾಗಿರುವ “ಕಪ್ಪು ರಂದ್ರದ” ಚಿತ್ರಗಳನ್ನು ಪಡೆಯುವಲ್ಲಿ ಖಗೋಳಶಾಸ್ತ್ರಜ್ಞರು ಯಶಸ್ವಿಯಾಗಿದ್ದು, ಬುಧವಾರ ಮೊದಲು ಚಿತ್ರಗಳು ಬಿಡುಗಡೆ ಮಾಡಿದ್ದಾರೆ. 

       ಇಂದಿಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಜ್ಞಾನಿಗಳು ಈ ವಿಷಯ ಬಹಿರಂಗಪಡಿಸಿದ್ದು, ಕಪ್ಪು ರಂದ್ರದ ಚಿತ್ರಗಳನ್ನು ಬಿಡುಗಡೆಗೊಳಿಸಿ ಅದರಲ್ಲಿ ಹೊಳೆಯುವ “ಡೊನಟ್” ಆಕಾರದ ವಸ್ತು ಕುರಿತು ಮಾಹಿತಿ ನೀಡಿದ್ದಾರೆ.

     ಡೊನಟ್ ಆಕಾರದ ವಸ್ತುವಿನ ಮಧ್ಯೆ ಕತ್ತಲು ಆವರಿಸಿದ್ದು, ಈ ಚಿತ್ರಗಳನ್ನು ಪಡೆಯಲು ಜಗತ್ತಿನ ಹಲವು ದೇಶಗಳು “ಇವೆಂಟ್ ಹಾರಿಜನ್ ಟೆಲಿಸ್ಕೋಪ್” ಅಳವಡಿಸಿದ್ದವು. ಕಪ್ಪು ರಂದ್ರದ ಚಿತ್ರಗಳನ್ನು ಪಡೆಯಲು ಇವೆಂಟ್ ಹಾರಿಜನ್ ಟೆಲಿಸ್ಕೋಪ್ ನ್ನು ವಿಶೇಷವಾಗಿ ನಿರ್ಮಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link