ವಾಷಿಂಗ್ಟನ್
ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಬೋಯಿಂಗ್ ಸಂಸ್ಥೆ ತಮ್ಮ 737-700 ವಿಮಾನಗಳಲ್ಲಿನ ಫ್ಯಾನ್ ಕೌಲ್ ರೂಪುರೇಷೆಯನ್ನು ಮರುವಿನ್ಯಾಸಗೊಳಿಸುವಂತೆ ಸಲಹೆ ನೀಡಿದೆ.ಕಳೆದ ವರ್ಷ ಈ ವಿಮಾನ ಪತನಗೊಂಡು ನೂರಾರು ಪ್ರಯಾಣಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಎನ್ ಟಿಎಸ್ ಬಿ ಈ ಸಲಹೆ ನೀಡಿದೆ.
ಈ ಅಪಘಾತಗಳು, ವಿಮಾನದ ಫ್ಯಾನ್ ಬ್ಲೇಡ್ ವಿಫಲಗೊಳ್ಳಬಹುದು ಮತ್ತು ಇಂಜಿನ್ ಪರೀಕ್ಷಾ ಪ್ರಮಾಣೀಕೃತ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸಿದ್ದಕ್ಕಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸಬಹುದು. ಆದ್ದರಿಂದ ಅದರ ವಾಯುಚೌಕಟ್ಟು ರೂಪುರೇಷೆಯನ್ನು ವಿಶ್ಲೇಷಣೆ ನಡೆಸಬೇಕಾಯಿತು ಎಂದು ರಾಬರ್ಟ್ ಸಮ್ ವಾಲ್ಟ್ ಹೇಳಿದ್ದಾರೆ.
ಮಂಗಳವಾರ ಈ ಸಂಬಂಧ ಹೇಳಿಕೆ ನೀಡಿರುವ ಅವರು, ಫ್ಯಾನ್ ಬ್ಲೇಡ್ ಗ ಯಾಂತ್ರಿಕ ಪರೀಕ್ಷೆಯಿಂದ ಮುಂದೆ ಸಾಗಬೇಕಾದ ಅಗತ್ಯವಿದೆ ಎಂದಿದ್ದಾರೆ.
2019ರ ಏಪ್ರಿಲ್ 17ರಂದು ಬೋಯಿಂಗ್ ವಿಮಾನ ಪತನಗೊಂಡ ಪರಿಣಾಮ ಓರ್ವ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದರು. ಈ ಅವಘಡಕ್ಕೆ ಅದರಲ್ಲಿ ಸಿಎಫ್ ಎಂ ಇಂಟರ್ ನ್ಯಾಷನಲ್ 56-7ಬಿಎಂಜಿನ್ ವೈಫಲ್ಯವೇ ಕಾರಣ ಎಂದು ವಿಶ್ಲೇಷಿಸಲಾಗಿದೆ. ಬೋಯಿಂಗï 737-700 ವಿಮಾನ ಹಲವು ಬಾರಿ ಪತನಗೊಂಡ ಪರಿಣಾಮ ಅನೇಕ ದೇಶಗಳು ಅದರ ಮೇಲೆ ನಿಷೇಧ ಹೇರಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








