ಲಂಡನ್:
ಜಗತ್ತಿನಾದ್ಯಂತ ಮರಣಮೃದಂಗ ಬಾರಿಸಿ ಸಾವಿರಾರು ಜನರ ಪ್ರಾಣ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ಸೋಂಕಿಗೆ ಇಂಗ್ಲೆಂಡಿನ ಆರೋಗ್ಯ ಸಚಿವರಾದ ನಾಡಿನ್ ಡೋರಿಸ್ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಇದರಿಂದಾಗಿ ಸ್ವಯಂ ನಿರ್ಬಂಧ ಹಾಕಿ ಮನೆಯೊಳಗೆ ಕುಳಿತಿದ್ದೇನೆ. ನನಗೆ ಎಲ್ಲಿಂದ ಸೋಂಕು ತಗುಲಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವೆ ತಿಳಿಸಿದ್ದಾರೆ.
ಇಂಗ್ಲೆಂಡಿನಲ್ಲಿ ಇದುವರೆಗೆ 6 ಮಂದಿ ಕೊರೊನಾ ವೈರಸ್ ಗೆ ಮೃತಪಟ್ಟಿದ್ದು 370ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆ ಯಾಗಿದೆ. ಇಂಗ್ಲೆಂಡಿನ ರಾಜಕಾರಣಿಯೊಬ್ಬರಿಗೆ ಇದೇ ಮೊದಲ ಸಲ ಕೊರೊನಾ ವೈರಸ್ ಬಂದಿದ್ದು ಅವರು ಪ್ರತಿನಿತ್ಯ ನೂರಾರು ಜನರ ಜೊತೆ ಸಂಪರ್ಕದಲ್ಲಿದ್ದರು. ಅವರಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್ ಕೂಡ ಒಬ್ಬರಾಗಿದ್ದಾರೆ. ಕಳೆದ ಶುಕ್ರವಾರ ಸಚಿವೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಈಗ ಗುಣಮುಖರಾಗುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ