ಬೀಜಿಂಗ್: 

ಭಾರತದೊಂದಿಗೆ ಸದಾ ತಂತ್ರಜ್ಞಾನ ಹಾಗೂ ಆರ್ಥಿಕತೆಯಲ್ಲಿ ಪೈಪೋಟಿಗೆ ಬರುವ ಚೀನಾ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ತನ್ನ ಚಂದ್ರಯಾನವನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ದೊಡ್ಡ ಸಾಧನೆ ಮಾಡಿದೆ, ಇದೇ ಮೊದಲ ಬಾರಿಗೆ ಚಂದ್ರನ ಮೇಲೆ ‘ಚಾಂಗ್’ಇ – 4’ ಎಂಬ ಬಾಹ್ಯಾಕಾಶ ನೌಕೆಯನ್ನು ಗುರುವಾರ ಯಶಸ್ವಿಯಾಗಿ ಲ್ಯಾಂಡ್ ಮಾಡಿದೆ ಎಂದು ತಿಳಿದು ಬಂದಿದೆ.
ಚಂದ್ರನ ಅಂಗಳದಲ್ಲಿ ನೆಲೆ ಸ್ಥಾಪಿಸಲು ಚೀನಾ ‘ಚಾಂಗ್’ಇ – 4’ ಯೋಜನೆ ರೂಪಿಸಿದ್ದು, ಈ ಯೋಜನೆಯ ವಿಶೇಷವೆಂದರೆ, ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಭಾಗದ ಅನ್ವೇಷಣೆಗಾಗಿ ಈ ನೌಕೆಯನ್ನು ಮುಡಿಪಾಗಿ ಇರಿಸಿದೆ ಎಂದು ಚೀನಾ ತಿಳಿಸಿದೆ.
