ನ್ಯೂಯಾರ್ಕ್:
ಭಾರತದ ಆಂತರಿಕ ವಿಷಯವಾಗಿರುವ ಆರ್ಟಿಕಲ್ 370ರದ್ದತಿಯನ್ನು ನೀವು ಕೋಮು ದೃಷ್ಟಿಯಿಂದ ನೋಡುವುದನ್ನು ಮೊದಲು ಬಿಡಬೇಕು ಆಗ ಮಾತ್ರ ಎಲ್ಲಾ ಸರಿಹೋಗುತ್ತದೆ ಎಂದು ಪಾಕಿಸ್ತಾನಕ್ಕೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಇದಾದ ನಂತರ ಭಾರತದ ಆರಂಭಿಕ ವಾದ ಮಂಡನೆ ಶುರುವಾದ ಕೂಡಲೆ ಪಾಕಿಸ್ತಾನ ಸಭೆಯಿಂದ ಹೊರ ನಡೆದಿದೆ ಎಂದು ವರದಿಯಾಗಿದೆ.
ಜಮೈತ್ -ಉಲೆಮಾ-ಇ-ಹಿಂದ್ ಎನ್ನುವ ಇಸ್ಲಾಮಿಕ್ ಸಂಘಟನೆಯೂ ಕಾಶ್ಮೀರದಲ್ಲಿ ಬದಲಾವಣೆಯನ್ನು ಬಯಸಿದೆ, ಜಗತ್ತಿನ ಮುಸಲ್ಮಾನ ದೇಶಗಳೊಂದಿಗೆ ನಮ್ಮ ಸಂಬಂಧ ಕಳೆದ 5 ವರ್ಷಗಳಲ್ಲಿ ಪ್ರಗತಿಯ ಹೆಜ್ಜೆಯತ್ತ ಸಾಗುತ್ತಿದೆ. ಹೀಗಿರುವಾಗ ಭಾರತ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಧೋರಣೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಸಾರ್ಕ್ ದೇಶಗಳ ಸಭೆಗೂ ಮುನ್ನ ನಡೆದ ವಿದೇಶಿ ವ್ಯವಹಾರ ಮತ್ತು ರಾಜತಾಂತ್ರಿಕ ಸಂಬಂಧಗಳ ಮಂಡಳಿಯನ್ನುದ್ದೇಶಿಸಿ ಮಾತನಾಡಿ ಭಾರತ, ಹಿಂದೂ ರಾಷ್ಟ್ರ ಕಲ್ಪನೆಯನ್ನು ರಾಜಕೀಯವಾಗಿ ಹೇರಿಕೆ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಪ್ರಶ್ನೆಯು ವಿಶ್ಲೇಷಣೆಗೊಂಡಿರುವ ರೀತಿಯನ್ನು ನಾವು ಒಪ್ಪುವುದಿಲ್ಲ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ