ಬೀಜಿಂಗ್:
ಚೀನಾ ಮತ್ತು ಅಮೆರಿಕ ದೇಶಗಳು ತಮ್ಮ ಶಾಂತಿಯುತ ಸಹಬಾಳ್ವೆಗೆ ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ವಿಭಿನ್ನ ರಾಜಕೀಯ ವ್ಯವಸ್ಥೆಗಳು ಮತ್ತು ಸಂಸ್ಕೃತಿಗಳ ನಡುವೆಯೂ ಈ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಬೇಕು ಎಂದು ಚೀನಾ ವಿದೇಶಿ ಸಚಿವರಾದ ವಾಂಗ್ ಯಿ ಹೇಳಿದ್ದಾರೆ.
ಭಾನುವಾರ ವಾರ್ಷಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಬೃಹತ್ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಚೀನಾ ಮತ್ತು ಬೃಹತ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಅಮೆರಿಕಕ್ಕೆ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಹೊಣೆಗಾರಿಕೆಯಿದೆ ಎಂದರು. ಅಮೆರಿಕವನ್ನು ಬದಲಿಸುವ ಇಲ್ಲವೇ ಪರಿವರ್ತಿಸುವ ಯಾವುದೇ ಉದ್ದೇಶಗಳು ಚೀನಾಕಿಲ್ಲ. ಅಮೆರಿಕ ಚೀನಾವನ್ನು ಬದಲಿಸುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದರು.