ಪ್ರಜಾಪ್ರಗತಿ ರಿಯಾಲಿಟಿ ಚೆಕ್ :ಕೊರೋನಾ ಸೋಂಕಿತರನ್ನು ಕೊಲ್ಲಲು ಚೀನಾ ಚಿಂತನೆ..?

ಬೀಜಿಂಗ್:

      ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಸುಮಾರು 20000 ರೋಗಿಗಳನ್ನು ಕೊಲ್ಲಲು ಚೀನಾ ಸರ್ಕಾರ ಯೋಜಿನೆ ರೂಪಿಸಿದೆ  ಎಂದು ಜನರಲ್ಲಿ ತಪ್ಪು ಮಾಹಿತಿಯೊಂದು ಹರಿದಾಡುತ್ತಿದೆ ಎಂದು ತಿಳಿದು ಬಂದಿದೆ. 

    ಕೊರೋನಾ ಸೋಂಕು ತಗುಲಿದ ರೋಗಿಗಳನ್ನು ಹತ್ಯೆ ಮಾಡಲು ಚೀನಾ ಈಗಾಗಲೇ ಅಲ್ಲಿನ ಉಚ್ಚನ್ಯಾಯಲಯದ ಮೊರೆ ಹೋಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಆದರೆ, ಈ ಸುದ್ದಿಯನ್ನು ಚೀನಾ ಸರ್ಕಾರ ಹಾಗೂ ಇತರೆ ಯಾವುದೇ ಅಧಿಕೃತ ವಾಹಿನಿಗಳು  ಮಾಹಿತಿಯನ್ನು ಧೃಡಪಡಿಸಿಲ್ಲ. 

   ಆದರೆ ಈ ನಡುವೆ ಕೊರೋನಾ ವೈರಸ್ ಸೋಂಕು ಭಾರೀ ಪ್ರಮಾಣದಲ್ಲಿ ಹಬ್ಬುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಯಾವುದೇ ವ್ಯಕ್ತಿ ತನಗೆ ಸೋಂಕು ತಗುಲಿರುವ ಮಾಹಿತಿಯನ್ನು ಮುಚ್ಚಿಟ್ಟರೆ, ಉದ್ದೇಶ ಪೂರ್ವಕವಾಗಿ ತಮ್ಮ ಕಾಯಿಲೆಯನ್ನು ಮುಚ್ಚಿಟ್ಟು ಸಾರ್ವಜನಿಕ ಸ್ಥಳಗಳಿಗೆ ಬಂದು, ಇತರರಿಗೆ ಹಬ್ಬಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಮರಣದಂಡನೆ ಸೇರಿದಂತೆ ಇನ್ನಿತರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap