ಚೀನಾದಿಂದ ಗಡಿಯಲ್ಲಿ ಸೇನಾ ಜಮಾವಣೆ…!

ಹೊಸದಿಲ್ಲಿ:
    ಇತ್ತೀಚೆಗಿನ ಕೆಲವು ದಿನಗಳಿಂದ ಭಾರತ ಹಾಗೂ ಚೀನಾ ದೇಶಗಳ ನಡುವೆ ಕೇವಲ ರಾಜತಾಂತ್ರಿಕ ಸಮರ ಮಾತ್ರವಲ್ಲದೆ ಗಡಿಯಲ್ಲಿ ಮಿಲಿಟರಿ ಪಡೆಯ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಯೋಧರೊಂದಿಗೆ ಮಾರಾಮಾರಿ ಮಾಡಿಕೊಂಡಿರುವ ಚೀನಾ ಸೈನ್ಯವು ಗಡಿಯೊಳಗೆ ನುಗ್ಗಿ ಹೆಲಿಕಾಪ್ಟರ್ ಹಾರಿಸಿ ಅತಿರೇಕದ ವರ್ತನೆ ತೋರಿತ್ತು.

    ಇದಕ್ಕೆ ಪ್ರತಿಯಾಗಿ ಭಾರತವು ಗಡಿಯಲ್ಲಿ ಯುದ್ಧ ವಿಮಾನ ಹಾರಿಸಿ ಎಚ್ಚರಿಕೆಯನ್ನು ರವಾನಿಸಿತ್ತು. ಇಷ್ಟಾದರೂ ಚೀನಾ ಹಳೆಯ ಚಾಳಿಯನ್ನು ಬಿಡುವಂತೆ ಕಾಣಿಸುತ್ತಿಲ್ಲ. ಇದೀಗ ಪ್ಯಾಂಗಾಂಗ್ ಗಡಿಯಲ್ಲಿ ಹೆಚ್ಚುವರಿ ಸೈನ್ಯ ನಿಯೋಜನೆಯೊಂದಿಗೆ ಮತ್ತೆ ಗುರುಗುಟ್ಟುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ತೀವ್ರವಾಗಿ ನಿಗಾ ವಹಿಸುತ್ತಿದ್ದಾರೆ. ಅಲ್ಲದೆ ಗಡಿಯಲ್ಲಿ ಚೀನಾದ ಒಂದೊಂದು ಹೆಜ್ಜೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ. ಭಾರತ ಕೂಡಾ ಲಡಾಕ್ ಗಡಿಯಲ್ಲಿ ಸೈನ್ಯದ ಬಲ ವೃದ್ಧಿ ಮಾಡುವ ಮೂಲಕ ಎಲ್ಲ ಸವಾಲುಗಳನ್ನು ಎದುರಿಸಲು ಸಜ್ಜಾಗಿ ನಿಂತಿದೆ.

    ವಿವಾದಿತ ಗಡಿ ಪ್ರದೇಶದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಭಾರತ ಹಾಗೂ ಚೀನಾ ಸೈನಿಕರ ನಡುವೆ ನೇರ ಮುಖಾಮುಖಿ ನಡೆದಿತ್ತು. ಈ ಪ್ರದೇಶದಲ್ಲಿ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಚೀನಾ ಪಡೆಯು ಮಿಲಿಟರಿ ವ್ಯಾಮಾಮ ನಡೆಸಿದೆ. ಪ್ಯಾಂಗಾಂಗ್ ತ್ಸೊ ಸರೋವರದಲ್ಲಿ ಆಕ್ರಮಣಕಾರಿಯಾಗಿ ಮೋಟಾರು ದೋಣಿಗಳ ಗಸ್ತು ತಿರುಗಾಟವನ್ನು ನಡೆಸಿದೆ.

   ಗ್ಯಾಲ್ವಾನ್ ಫ್ಲ್ಯಾಶ್ ಪಾಯಿಂಟ್‌ನಲ್ಲಿ ಚೀನಾ ಸೈನ್ಯವು ತನ್ನ ಸೇನೆಯನ್ನು ನಿಯೋಜಿಸಿದ್ದು, 80ರಷ್ಟು ಟೆಂಟ್‌ಗಳನ್ನು ಸ್ಥಾಪಿಸಿದೆ. ಇದೇ ಪ್ರದೇಶದಲ್ಲಿ ಭಾರತ ಕೂಡಾ ಬಲವರ್ಧಿಸಿದೆ. ಮೂಲಗಳ ಪ್ರಕಾರ ಚೀನಾ ಬಲವರ್ಧನೆಯೊಂದಿಗೆ ಮುಖಾಮುಖಿ ಪ್ರದೇಶ ನಾಲ್ಕು ಕೀಲೋಮೀಟರ್‌ಗಳಷ್ಟು ವಿಸ್ತಾರವಾಗಿದೆ.

   ಕಳೆದ ವರ್ಷ ನಿರ್ಮಿಸಲಾದ ಸಬ್ ಸೆಕ್ಟರ್ ನಾರ್ತ್ (ಎಸ್‌ಎಸ್‌ಎನ್) ಬಂಧಿಸುವ ದರ್ಬುಕ್-ಶೈಯಾಕ್-ದೌಲತ್ ಬೆಗ್ ಒಲ್ಡಿ (ಡಿಬಿಒ) ರಸ್ತೆ ಗುರಿಯಾಗಿಸುವ ಸಾಧ್ಯತೆಯಿದೆ. ಇದನ್ನು ತಡೆಯಲು ಭಾರತ ಕೂಡಾ ಬೇಕಾದಷ್ಟು ಸೈನ್ಯ ನಿಯೋಜನೆ ಮಾಡಿದೆ.

     1962ರ ಭಾರತ-ಚೀನಾ ಯುದ್ಧವನ್ನು ಹೋಲಿಸಿದಾಗ ಈಗ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ಅಂದು ಭಾರತಕ್ಕಿಂತಲೂ ಹೆಚ್ಚು ಬಲವನ್ನು ಹೊಂದಿರುವ ಚೀನಾ ಸುಲಭವಾಗಿ ಭಾರತೀಯ ಸೈನ್ಯವನ್ನು ಮಟ್ಟ ಹಾಕಿತ್ತು. ಆದರೆ ಈಗ ಪರಿಸ್ಥಿತಿ ತುಂಬಾ ಭಿನ್ನವಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ.

     ಗಸ್ತು ತಿರುಗಲು ಹಾಗೂ ಸ್ಥಳೀಯ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಇತ್ತೀಚೆಗೆ ಗ್ಯಾಲ್ವಾನ್ ಪ್ರದೇಶದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣವನ್ನು ಮಾಡಿತ್ತು. ಇದರಿಂದ ಚೀನಾ ವ್ಯಾಪಾಕ ಅಸಾಮಾಧನವನ್ನು ಹೊಂದಿದೆ.ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಯ ಮೂಲಕ ವಿವಾದ ಬಗೆಹರಿಸಲು ಪ್ರಯತ್ನ ನಡೆಯುತ್ತಿದೆ. ಆದಾಗ್ಯೂ ಚೀನಾದ ಪೀಪಲ್ಸ್ ಲಿಬೆರೇಷನ್ ಆರ್ಮಿ (ಪಿಎಲ್‌ಎ) ಆಕ್ರಮಣಕಾರಿ ನಿಲುವನ್ನು ಹೊಂದಿರುವುದು ಆತಂಕಕಾರಿಯಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap