ಜೀಜಿಂಗ್:
ಕೆಲ ದಿನಗಳ ಹಿಂದೆಯಷ್ಟೆ ಲಡಾಖ್ ನಲ್ಲಿ ಜಮಾಯಿಸಿ ಭಾರತಕ್ಕೆ ತೊದರೆ ನೀಡುತ್ತಿದ್ದ ಚೀನಾ ಇದೀಗ ವರಸೆ ಬದಲಿಸಿದೆ ಭಾರತದ್ದು ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ ಎಂದು ಶ್ಲಾಘಿಸಿದೆ. ಭಾರತದ ಪರ್ವತ ಸೇನಾ ಪಡೆ ಯಾವುದೇ ಪ್ರತಿಕೂಲ ವಾತವರಣದಲ್ಲೂ ಎಂತಹುದೇ ದುರ್ಗಮ ಬೆಟ್ಟ ಗುಡ್ಡಗಳಲ್ಲಿ ಶತ್ರುಪಡೆಯ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಚೀನಾದ ಮಿಲಿಟರಿ ತಜ್ಞರೊಬ್ಬರು ಪ್ರಶಂಸಿಸಿದ್ದಾರೆ.
ಭಾರತದ ಪರ್ವತ ಸೇನಾ ಪಡೆಗೆ ಬಹುಪರಾಕ್ ಹೇಳಿರುವುದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಯುದ್ಧೋಪಕರಣಗಳನ್ನು ತಯಾರಿಸಿಕೊಡುವ ಬಹುದೊಡ್ಡ ಸಂಸ್ಥೆಯ ತಜ್ಞನಾಗಿರುವ ಹುಯಾಂಗ್ ಗ್ಯೂಝಿ. ಇಂತಹ ಛಾಯಿ ಭಾರತದ ಪರ್ವತ ಸೇನಾ ಪಡೆಗೆ ಬಿಟ್ಟರೆ ಅಮೆರಿಕಾ, ರಷ್ಯಾ ಅಥವಾ ಇನ್ಯಾವ ಯುರೋಪಿಯನ್ ರಾಷ್ಟ್ರಗಳಿಗಿಲ್ಲ ಎಂದು ಗ್ಯೂಝಿ ಮಿಲಿಟರಿ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ