ಅಮೆರಿಕ ದೂತವಾಸ ಕಛೇರಿ ವಶಕ್ಕೆ ಪಡೆದ ಚೀನಾ..!

ಬೀಜಿಂಗ್:

     ಚೀನಾದ ಚೆಂಗ್ಡೂ ನಗರದಲ್ಲಿರುವ ಅಮೆರಿಕ ಧೂತವಾಸ ಕಚೇರಿಯನ್ನು ಚೀನಾ ಸರ್ಕಾರ ವಶಕ್ಕೆ ಪಡೆದಿದ್ದು, ಕಟ್ಟಡದ ಮೇಲಿದ್ದ ಅಮೆರಿಕ ಧ್ವಜವನ್ನು ಅಧಿಕಾರಿಗಳು ಕೆಳಗೆ ಇಳಿಸಿದ್ದಾರೆ.

     ಈ ಹಿಂದೆ ಹೂಸ್ಟನ್ ನಲ್ಲಿ ಚೀನಾ ದೂತವಾಸ ಕಚೇರಿ ಸ್ಥಗಿತಕ್ಕೆ ಅಮೆರಿಕ ಸರ್ಕಾರ ಆದೇಶ ನೀಡಿತ್ತು. ಅಮೆರಿಕನ್ನರ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿರುವುದಾಗಿ ಅಮೆರಿಕ ಹೇಳಿತ್ತು. ಬಳಿಕ ಹ್ಯೂಸ್ಟನ್ ದೂತವಾಸ ಕಚೇರಿಯನ್ನು ಚೀನಾ ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಇದರ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾಗಿರುವ ಚೀನಾ, ಚೆಂಗ್ಡುವಿನಲ್ಲಿರುವ ಅಮೆರಿಕಾದ ದೂತವಾಸ ಕಚೇರಿ ಸ್ಥಗಿತಕ್ಕೆ ಆದೇಶ ನೀಡಿತ್ತು. 

    ಇದೀಗ ಚೀನಾಕ್ಕೆ ಅಗತ್ಯವಿರುವಂತೆ ಸೋಮವಾರ ಬೆಳಿಗ್ಗೆ 10 ಗಂಟೆಗೆ, ಚೆಂಗ್ಡೂದಲ್ಲಿನ ಅಮೆರಿಕ ದೂತಾವಾಸವನ್ನು ಮುಚ್ಚಲಾಗಿದೆ. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂಭಾಗದ ಪ್ರವೇಶದ್ವಾರದ ಮೂಲಕ ಪ್ರವೇಶಿಸಿ ಆವರಣವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

     ಕಾನ್ಸುಲೇಟ್‌ ಕಚೇರಿ ಬಳಿ ನೂರಾರು ಜನರು ಸೇರಿದ್ದರು. ಹಸಿರಿನಿಂದ ತುಂಬಿರುವ ಈ ಸ್ಥಳ ಭಾನುವಾರ ಮಿನಿ ಪ್ರವಾಸಿ ತಾಣದಂತೆ ಭಾಸವಾಗುತ್ತಿತ್ತು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಪೊಲೀಸ್‌ ವಾಹನಗಳನ್ನು ಹೊರತುಪಡಿಸಿ, ರಸ್ತೆ ಸಂಚಾರನ್ನು ಬಂದ್‌ ಮಾಡಲಾಗಿತ್ತು. 

    ಜುಲೈ 24 ರಂದು, ಸಚಿವಾಲಯವು ಚೀನಾದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ ನೀಡಿದ್ದ ತನ್ನ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತಿಳಿಸಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap