ಇಸ್ಲಾಮಾಬಾದ್:
ಪಾಕಿಸ್ತಾನದಲ್ಲಿ ದೃಢಪಟ್ಟ ಕೊವಿದ್-19 ಪ್ರಕರಣಗಳ ಸಂಖ್ಯೆ5,011 ಕ್ಕೆ ಏರಿದ್ದು, ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಶನಿವಾರ ರಾತ್ರಿ ನವೀಕೃತ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.ದೇಶದ ಪೂರ್ವ ಭಾಗದ ಪಂಜಾಬ್ ಪ್ರಾಂತ್ಯದಲ್ಲಿ ಒಟ್ಟು 2,414 ಪ್ರಕರಣಗಳು ವರದಿಯಾಗುವುದರೊಂದಿಗೆ ಈ ಪ್ರದೇಶ ಹೆಚ್ಚು ಭಾದಿತವಾಗಿ ಮುಂದುವರೆದಿದೆ. ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 1,318 ಪ್ರಕರಣಗಳು ದೃಢಪಟ್ಟಿವೆ.
ವಾಯವ್ಯ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ಕನಿಷ್ಠ 697, ನೈರುತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 220 ಮತ್ತು ಉತ್ತರ ಗಿಲ್ಗಿಟ್-ಬಲ್ತಿಸ್ತಾನ್ ಪ್ರಾಂತ್ಯದಲ್ಲಿ 215 ಮತ್ತು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 113 ಪ್ರಕರಣಗಳು ದೃಢಪಟ್ಟಿವೆ.