ವಿಶ್ವದಲ್ಲಿ 95,000 ಸಾವಿರದ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ…!

ಪ್ಯಾರಿಸ್:

      ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿಗೆ  ಬಲಿಯಾದವರ ಸಂಖ್ಯೆ  90,000 ದಾಟಿದ್ದು ಇನ್ನೂ ಒಂದೆರಡು ದಿನಗಳಲ್ಲಿ 1 ಲಕ್ಷ ಗಡಿ ದಾಟುವ ಆತಂಕ ಎದುರಾಗಿದೆ. 

     ಅಮೆರಿಕಾ ಒಂದರಲ್ಲಿಯೇ ಗುರುವಾರ 1443 ಮಂದಿ ಸಾವಿಗೀಡಾಗಿದ್ದು, ಇದರಿಂದಾಗಿ 2 ದಿನಗಳಲ್ಲಿ 3400 ಜನರು ಮೃತಪಟ್ಟಂತಾಗಿದೆ. ಬ್ರಿಟನ್ ನಲ್ಲಿ ಕೂಡ ಪರಿಸ್ಥತಿ ಭಿನ್ನವಾಗಿಲ್ಲ  881 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 7978ಕ್ಕೆ ಏರಿಕೆಯಾಗಿದೆ.ಪ್ರಾನ್ಸ್ ನಲ್ಲಿ 1,341 ಜನರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 12,210ಕ್ಕೇರಿಕೆಯಾಗಿದೆ. ಸ್ಪೇನ್ ನಲ್ಲಿಯೂ 683 ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 15238ಕ್ಕೆ ಹೆಚ್ಚಳವಾಗಿದೆ. 

      ಈ ಎಲ್ಲಾ ರಾಷ್ಟ್ರಗಳಿಗಿಂತಲೂ ಇಟಲಿ ಮೊದಲನೇ ಸ್ಥಾನದಲ್ಲಿದ್ದು, ಸಾವಿನ ಸಂಖ್ಯೆ 17,669ಕ್ಕೆ ಏರಿಕೆಯಾಗಿದೆ. ಅಲ್ಲದೆ, 139,422 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap