ಜಿನೇವಾ:
ಕೊರೊನಾ ವೈರಸ್ ಸೋಂಕು ಯಾವ ದೇಶವನ್ನೂ ಬಿಟ್ಟಿಲ್ಲ, ಯಾವ ವ್ಯಕ್ತಿಯ ಮೇಲು ಕರುಣೆ ತೋರಿಸಿಲ್ಲಾ . ಇನ್ನು ವಿಶ್ವಸಂಸ್ಥೆಯದ್ದೇ ಒಂದು ಭಾಗವಾಗಿರುವ ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಈ ಮಹಾಮಾರಿ ವೈರಸ್ ತನ್ನ ಅಟ್ಟಹಾಸವನ್ನು ಮೆರೆದಿದೆ.
ವಿಶ್ವವ್ಯಾಪಿ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಸಿಬ್ಬಂದಿಗಳಲ್ಲಿ ಈ ವೈರಸ್ ಪಾಸಿಟಿವ್ ಆಗಿರುವುದು ಧೃಢಪಟ್ಟಿದೆ ಎಂದು ಡಬ್ಲ್ಯು.ಹೆಚ್.ಒ. ಅಧಿಕಾರಿಯೊಬ್ಬರು ಅಂತಾರಾಷ್ಟ್ರೀಯ ವೆಬ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ