ಅಮೇರಿಕ : ಕೊರೋನಾ ಲಸಿಕೆ ಮಾನವ ಪ್ರಯೋಗ ವಿಫಲ…!

ವಾಷಿಂಗ್ಟನ್:

      ಇಡಿಯ ವಿಶ್ವದಲ್ಲಿ ಅಧಿಕ ರಾಷ್ಟ್ರಗಳಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಿದ್ದು ಇದಕ್ಕೆ ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕ ಮೂಲದ ಔಷಧ ಕಂಪನಿಯು ಕೊರೋನಾ ವೈರಸ್ ಔಷಧವನ್ನು ಮಾನವನ ಮೇಲೆ ಪ್ರಯೋಗ ಮಾಡಿ ವಿಫಲವಾಗಿದೆ.

      ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವಲ್ಲಿ ರೇಸ್ ನಲ್ಲಿ ಪ್ರಮುಖವಾಗಿದ್ದ ಅಮೆರಿಕ ಮೂಲದ ಗಿಲಿಯಡ್ ಸಂಸ್ಥೆಯ ಬಹು ನಿರೀಕ್ಷಿತ ‘ರೆಮ್ಡೆಸಿವಿಯರ್’ ಔಷಧದ ಮಾನವ ಪ್ರಯೋಗ ವಿಫಲವಾಗಿದೆ. ಕೋವಿಡ್-19 ರೋಗಿಗಳಲ್ಲಿ ಭರವಸೆ ಮೂಡಿಸಿದ್ದ ಅಮೆರಿಕಾದ ಔಷಧ ತಯಾರಿಕಾ ಕಂಪನಿ ಗಿಲಿಯಡ್ ಸೈನ್ಸಸ್ ಇಂಕ್’ನ ಪ್ರಾಯೋಗಿಕ ಔಷಧ ‘ರೆಮ್ಡೆಸಿವಿಯರ್’ ಮಾನವ ಪ್ರಯೋಗದಲ್ಲಿ ವಿಫಲಗೊಂಡಿದೆ. 

     ಈ ಕುರಿತ ವರದಿಯು ವಿಶ್ವ ಆರೋಗ್ಯ ಸಂಸ್ಥೆಯ ವೆಬ್’ಸೈಟ್ ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಫೈನಾನ್ಶಿಯಲ್ ಟೈಮ್ ನಲ್ಲಿ ಈ ವರದಿ ಬಿತ್ತರಗೊಂಡಿದೆ. ವರದಿ ಬಿತ್ತರಗೊಳ್ಳುತ್ತಿದ್ದಂತೆಯೇ ಔಷಧ ತಯಾರಿಕಾ ಕಂಪನಿ ಗಿಲೀಯಡ್ ಸೈನ್ಸಸ್ ಪೋಸ್ಟ್ ಅನ್ನು ತೆಗೆದುಹಾಕಿದೆ. 

      ಪ್ರಸ್ತುತ ಫೈನಾನ್ಶಿಯಲ್ ಟೈಮ್ಸ್ ನಲ್ಲಿ ಬಿತ್ತರಗೊಂಡಿರುವ ವರದಿ ಪ್ರಕಾರ, ಒಟ್ಟು 237 ಮಂದಿಯನ್ನು ಸಂಶೋಧನೆಗೊಳಪಡಿಸಲಾಗಿದ್ದು, 158 ಮಂದಿಯನ್ನು ಡ್ರಗ್ ಮತ್ತು 79 ಮಂದಿಯನ್ನು ಕಂಟ್ರೋಲ್ ಗ್ರೂಪ್ ಎಂದು ವಿಭಜಿಸಲಾಗಿತ್ತು. ಇದರಲ್ಲಿ, ಔಷಧ ನೀಡುತ್ತಿದ್ದಂತೆಯೇ 18 ರೋಗಿಗಳಲ್ಲಿ ಅಡ್ಡಪರಿಣಾಮಗಳು ಕಂಡು ಬಂದಿದ್ದು, ಕೂಡಲೇ ಔಷಧಿ ನೀಡುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ವರದಿ ಪರಿಶೀಲನೆಯಲ್ಲಿದ್ದು, ಈ ನಡುವೆ ವರದಿಯನ್ನು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಡಬ್ಲ್ಯೂಹೆಚ್ಒ ಹೇಳಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap