ಲಂಡನ್:
ಕೊರೋನಾ ಪ್ರಭಾವ ಮನುಷ್ಯರನ್ನಲ್ಲದೇ ಪೋಲಿಯೋ ಅಭಿಯಾನದ ಮೇಲೂ ಬಿದ್ದಿದೆ ಪೋಲಿಯೋ ಅಭಿಯಾನವನ್ನು 6 ತಿಂಗಳವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ .
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅದರ ಪಾಲುದಾರರು ಮುಂದಿನ 6 ತಿಂಗಳವರೆಗೆ ರಾಷ್ಟ್ರೀಯ ಚುಚ್ಚುಮದ್ದು ಅಭಿಯಾನ, ಪೋಲಿಯೋ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಕೊರೋನಾ ಸಮುದಾಯಕ್ಕೆ ಹಾಗೂ ಮುನ್ನೆಲೆಯಲ್ಲಿರುವ ಸಿಬ್ಬಂದಿಗಳಿಗೆ ಹರಡದಂತೆ ತಡೆಯುವುದು ಇದರ ಉದ್ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಪೋಲಿಯೋ ಮೇಲ್ವಿಚಾರಣಾ ಮಂಡಳಿ ಸಭೆಯ ನಂತರ ಈ ಅಧಿಕೃತ ಘೋಷಣೆ ಪ್ರಕಟಗೊಂಡಿದೆ. ಪಾಕಿಸ್ತಾನ ಅಫ್ಘಾನಿಸ್ತಾನ, ನೈಜೀರಿಯಾ ಸೇರಿದಂತೆ 10 ರಾಷ್ಟ್ರಗಳಲ್ಲಿ ಪೋಲಿಯೋ ಸಮಸ್ಯೆ ಇನ್ನೂ ಸವಾಲಿನ ಸಂಗತಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ