ಚೀನಾ :
ವಿಶ್ವದೆಲ್ಲೆಡೆ ತನ್ನ ರುದ್ರತಾಂಟವ ಆಡುತ್ತಿರುವ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೊಸ ವಿಲಕ್ಷಣ ರೂಪ ತಳೆಯುತ್ತಿದೆ.ಗುಣಮುಖರಾದವರಲ್ಲೂ ಜೀವಂತ ವೈರಾಣುಗಳನ್ನು ವೈದ್ಯರು ಪತ್ತೆ ಮಾಡಿದ್ದಾರೆ ಎಂಬ ವರದಿ ಪ್ರಕಟಗೊಂಡ ಬೆನ್ನಲ್ಲೇ ರೋಗ ಲಕ್ಷಣಗಳೇ ಕಾಣಿಸಿಕೊಂಡಿಲ್ಲಾ , ಆದರು1541 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಬಗ್ಗೆ ಮಾಹಿತಿ ನೀಡಿದ್ದು, ರೋಗಲಕ್ಷಣಗಳು ಹೊರಗೆ ಕಾಣಿಸಿಕೊಳ್ಳದ ಆದರೆ ಜೀವಂತ ವೈರಾಣುಗಳ ಸೋಂಕು ತಗುಲಿರುವವರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಚೀನಾದ ಈ ಹೊಸ ಮಾಹಿತಿಯನ್ನು ಕೊರೋನಾ ವೈರಸ್ ಹರಡುವಿಕೆಯಯನ್ನು ’ಸೆಕೆಂಡ್ ವೇವ್’ (second wave) ಎಂದೇ ವಿಶ್ಲೇಷಿಸಲಾಗುತ್ತಿದೆ.