ಬೆಲ್ಜಿಯಂ : ಬೆಕ್ಕನ್ನು ಬಲಿ ಪಡೆದ ಕೊರೋನಾ..!

ಬ್ರುಸೇಲ್ಸ್

     ಜಾಗತಿಕವಾಗಿ ಮಾನವಕುಲಕ್ಕೆ ಕಂಟಕವಾಗಿರುವ ಕೊರೋನಾವೈರಸ್ ಕೇವಲ ಮಾನವನನ್ನನ್ನು ಮಾತ್ರವಲ್ಲದೆ ಪ್ರಾಣಿಗಳಿಗೆ ಸಹ ಕಾಡುತ್ತಿದೆ. ಕೊರೋನಾ ಪೀಡಿತ ವ್ಯಕ್ತಿಯೊಬ್ಬ ಅವನ ಮನೆಯ ಸಾಕುಬೆಕ್ಕಿನೊಡನೆ ಸಂಪರ್ಕಕ್ಕೆ ಬಮ್ದ ಕಾರಣ ಇದೀಗ ಆ ಬೆಕ್ಕಿಗೆ ಸಹ ಕೊರೋನಾ ಸೋಂಕು ತಗುಲಿದ ಘಟನೆ ಬೆಲ್ಜಿಯಂ ನಲ್ಲಿ ನಡೆದಿದೆ. ಬೆಕ್ಕಿನ ಮಾಲೀಕ ಸೋಂಕಿನಿಂದ ಪೀಡಿತನಾಗಿದ್ದು ಆತನಿಂದ ಇದೀಗ ಮಾರಕ ರೋಗ ಬೆಕ್ಕಿಗೆ ಸಹ ಹರಡಿದೆ ಎಂದು ಬೆಲ್ಜಿಯಂ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

    ಸಾಕುಪ್ರಾಣಿಗಳಿಗೆ ಸೋಂಕು ತಗುಲುವಿಕೆ ಪ್ರಕರಣಗಳು ಅಪರೂಪವಾಗಿದ್ದು ಸಾಕುಪ್ರಾಣಿಗಳಿಂದ ಮನುಷ್ಯರಿಗೆ ಮಾರಕ ರೋಗ ತಗುಲುವ ಸುದ್ದಿಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

    ಈ ಹಿಂದೆ ಹಾಂಗ್ ಕಾಂಗ್ ನಲ್ಲಿ  ಇದೇ ರೀತಿಯ ಪ್ರಕರಣಗಳಾಗಿದ್ದವೆಂದು ಹೇಳಲ್ಗಿದೆ. ಅಲ್ಲಿ ಎರಡು ನಾಯಿಗಳಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿತ್ತು. ವೈರಸ್ ಸೋಂಕಿತ ಜನರೊಡನೆ ಸಂಪರ್ಕದಲ್ಲಿದ್ದ  17 ನಾಯಿಗಳು ಮತ್ತು ಎಂಟು ಬೆಕ್ಕುಗಳಿಗೆ ಸೋಂಕು ತಗುಲಿತ್ತು.

 

     ಬೆಲ್ಜಿಯಂನಲ್ಲಿ, ಲೀಜ್ನಲ್ಲಿನ ಪಶುವೈದ್ಯಕೀಯ ಔಷಧಾಲಯದ ಸಂಶೋಧಕರು ಈ ಸಂಶೋಧನೆಯನ್ನು ಮಾಡಿದ್ದಾರೆ.ಇದು “ಒಂದು ಪ್ರತ್ಯೇಕ ಪ್ರಕರಣ”, ಇದು “ಪ್ರಾಣಿಗಳು ಮತ್ತು ಸೋಂಕಿತ ಮಾನವರ ನಡುವಿನ ನಿಕಟ ಸಂಪರ್ಕ” ದ ನಂತರ ಸಂಭವಿಸಬಹುದು ಎಂದು ಸಾಂಕ್ರಾಮಿಕ ರೋಗದ ಬಗ್ಗೆ ಸರ್ಕಾರಿ ಸಂಸ್ಥೆಯ ವಕ್ತಾರ ವೈದ್ಯ ಇಮ್ಯಾನುಯೆಲ್ ಆಂಡ್ರೆ ಹೇಳಿದ್ದಾರೆ

     “ಈ ವೈರಸ್ ಅನ್ನು ಮನುಷ್ಯರಿಂದ ಪ್ರಾಣಿಗಳಿಗೆ ಹರಡಬಹುದು ಆದರೆ “ನಮ್ಮ ಸಮಾಜದಲ್ಲಿ ಪ್ರಾಣಿಗಳು ಸಾಂಕ್ರಾಮಿಕ ರೋಗವಾಹಕವಾಗುತ್ತದೆ ಎಂದು ಎಣಿಸಲು ಸಾಧ್ಯವಿಲ್ಲ.” ಎಂದು ಅವರು ಹೇಳಿದರು. ಹಾಂಗ್ ಕಾಂಗಿನ ನಾಯಿಗಳು ಯಾವ ಬಗೆಯ ರೋಗಲಕ್ಷಣಗಳನ್ನು ತೋರಿಸಿರಲಿಲ್ಲ ಆದರೆ ಬೆಲ್ಜಿಯಂ ಬೆಕ್ಕು ಉಸಿರಾಟದ ಏರುಪೇರು ಹಾಗೂ ಜೀರ್ಣ ಸಮಸ್ಯೆಗಳ ಲಕ್ಷಣ ಸೂಚಿಸಿದೆ. ಎಂದು ಬೆಲ್ಜಿಯಂನ ಆಹಾರ ಸುರಕ್ಷತಾ ಸಂಸ್ಥೆ ಎಎಫ್ಎಸ್ಸಿಎ ಹೇಳಿಕೆಯಲ್ಲಿ ತಿಳಿಸಿದೆ “ಇಲ್ಲಿಯವರೆಗೆ, ಸಾಕು ಪ್ರಾಣಿಗಳು ಮನುಷ್ಯರಿಗೆ ಅಥವಾ ಇತರ ಸಾಕುಪ್ರಾಣಿಗಳಿಗೆ ವೈರಸ್ ಹರಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಸಾರ್ವಜನಿಕ ಪ್ರಾಧಿಕಾರ ಹೇಳಿದೆ.ಮುನ್ನೆಚ್ಚರಿಕೆ ಕ್ರಮವಾಗಿ, ಸಾಕುಪ್ರಾಣಿಗಳೊಂದಿಗೆ ವ್ಯವಹರಿಸುವಾಗ ನೈರ್ಮಲ್ಯದ ಪ್ರಮಾಣಿತ ನಿಯಮಗಳನ್ನು ಅಳವಡಿಸಿಕೊಳ್ಳಲು “ಬಲವಾಗಿ ಶಿಫಾರಸು ಮಾಡಲಾಗಿದೆ”: “ಸಾಕುಪ್ರಾಣಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ. ಯಾವುದೇ ಪ್ರಾಣಿಗಳನ್ನು  ಮುಟ್ಟಿದ ಬಳಿಕ  ಕೈ ತೊಳೆಯಿರಿ, ಪ್ರಾಣಿ ನಿಮ್ಮ ಮುಖವನ್ನು ನೆಕ್ಕಲು ಬಿಡಬೇಡಿ.”ವೈರಸ್ ಪ್ರಾಣಿಗಳಿಗೆ ಹರಡುವುದನ್ನು ತಡೆಗಟ್ಟುವುದು ಮತ್ತು ಪ್ರಾಣಿಯು ವೈರಸ್‌ನ ವಾಹಕವಾಗುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap