ಜೆನೆವಾ
ಕೊರೋನಾ ಸೋಂಕು ಭೂಮಿ ಮೇಲೆ ಧೀರ್ಘ ಕಾಲದವರಗೆ ಇರಬಹುದು ನಾವು ಇದರ ವಿರುದ್ಧ ಹೋರಾಟದಲ್ಲಿ ಎಂದಿಗೂ ಎಚ್ಚರ ತಪ್ಪಬಾರದು ಮತ್ತು ಬಹುತೇಕ ರಾಷ್ಟ್ರಗಳು ಸೋಂಕನ್ನು ನಿಭಾಯಿಸುವ ಮತ್ತು ತಡೆಗಟ್ಟುವ ಮೊದಲ ಹಂತದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೋನಾ ವೈರಸ್ ನಿಯಂತ್ರಣದಲ್ಲಿದೆ ಎಂದು ಕೆಲ ದೇಶಗಳು ಭಾವಿಸುತ್ತಿವೆ, ಆದರೆ ಅಲ್ಲಿ ಮತ್ತೆ ಸೋಂಕು ಕಂಡುಬರುತ್ತಿದೆ, ಆಫ್ರಿಕಾ ಮತ್ತು ಅಮೆರಿಕಾ ದೇಶಗಳಲ್ಲಿ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶಗಳು ಈ ಬಗ್ಗೆ ಇನ್ನೂ ಹೆಚ್ಚಿನ ಜಾಗ್ರತೆ ವಹಿಸಿ ಸನ್ನದ್ಧವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ರಂದೇ ಇದನ್ನು ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಘೋಷಿಸಿತ್ತು. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ ಎಂದು ಟೆಡ್ರೊಸ್ ಅದ್ಹನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
