ಕೊಲಂಬೊ:
ಶ್ರೀಲಂಕಾದ ಅತಂತ್ರ ಸಂಸತ್ತಿನ ನಾಯಕನಾಗಿ ನಾಮನಿರ್ದೆಶಿತ ಮಹಿಂದ ರಾಜಪಕ್ಸೆ ಅವರಿಗೆ ನ್ಯಾಯಾಲಯದಲ್ಲಿ ಶರತ್ತು ಬದ್ದ ಜಯ ಸಿಕ್ಕಿದ್ದು ಪ್ರಧಾನಿ ಯಾದರು ಯಾವುದೇ ಪ್ರಮುಖ ನಿರ್ಧರಗಳನ್ನು ತೆಗೆದುಕೊಳ್ಳಲ್ಲು ಅಧಿಕಾರ ನೀಡಲಾಗಿಲ್ಲ ಮತ್ತು ಅವಧಿ ಪೂರ್ಣಗೊಳ್ಳುವ ವರೆಗೂ ಮುಂದುವರಿಯಬಹುದು ಎಂದು ಹೇಲುವ ಮೂಲಕ ನ್ಯಾಯಾಲಯ ತೀರ್ಪು ನೀಡಿದ್ದು ಇದರಿಂದ ಶ್ರೀಲಂಕಾದ ರಾಜಕೀಯ ಅಸ್ತಿರತೆಯಲ್ಲಿ ಸ್ವಲ್ಪವಾದರು ಕಡಿಮೆಯಾದಂತೆ ಇದೆ.
ವಿವಾದಾತ್ಮಕ ನಿರ್ಧಾರದ ಮೂಲಕ ರಾನಿಲ್ ವಿಕ್ರಮ್ ಸಿಂಘೆ ಅವರನ್ನು ವಜಾಗೊಳಿಸಿ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರಿಗೆ ಭಾರೀ ಮುಖಭಂಗವಾಗಿದೆ. ರಾಜಪಕ್ಸ ಪ್ರಧಾನಿಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ತಿಳಿ ಹೇಳಿದೆ.
ಪ್ರಧಾನಿ, ಕ್ಯಾಬಿನೆಟ್ ಮತ್ತು ಉಪಮಂತ್ರಿಗಳಂತೆ ಕಾರ್ಯನಿರ್ವಹಿಸುವುದನ್ನು ತಡೆಗಟ್ಟಿ ರಾಜಪಕ್ಸ ಹಾಗೂ ಆತನ ಸರ್ಕಾರದ ವಿರುದ್ಧ ಮಧ್ಯಂತರ ಆದೇಶ ಹೊರಡಿಸಲಾಗಿದ್ದು, ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ ಎಂದು ಕೊಲಂಬೊ ಗೆಜೆಟ್ ವರದಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ