60 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ ..!!

ಸಿಂಗಾಪುರ:

      ಪ್ರಸಕ್ತ ಸಾಲಿನಲ್ಲಿ ಅಮೇರಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ಒಟ್ಟು ಹೂಡಿಕೆಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮೊತ್ತದ ಹೂಡಿಕೆಗಳನ್ನು ಹಿಂತೆಗುದುಕೊಂಡ ಬೆನ್ನಲೇ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ .

     ಮೊದಲ ಬಾರಿಗೆ ಒಂದು ಬ್ಯಾರೆಲ್‌ ಕಚ್ಚಾ ತೈಲಕ್ಕೆ 60 ಡಾಲರ್ ಗಿಂತ ಹೆಚ್ಚಾಗಿದೆ .ಮಂಗಳವಾರ ಸಂಜೆಯ ವೇಳೆಗೆ ತೈಲದ ಬೆಲೆ ಶೇ 0.5 ರಷ್ಟು ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ .ಭಾರತದ ಕಾಲಮಾನದ ಪ್ರಕಾರ ಬೆಳಿಗ್ಗೆ 9:33ಕ್ಕೆ 32 ಸೆಂಟ್ಸ್  ಹೆಚ್ಚಾಗಿ ಪ್ರತಿ ಬ್ಯರಲ್ ಗೆ 60.35 ಡಾಲರ್‌ ಆಗಿದೆ ಎನ್ನಲಾಗಿದೆ.ಇನ್ನು ಅಮೇರಿಕ ಸ್ವಾಮ್ಯದ ಕಂಪನಿಗಳು ಕಚ್ಚಾ ಬ್ಯಾರೆಲ್ ಗೆ 25 ಸೆಂಟ್ಸ್ ಏರಿಕೆ ಮಾಡಿವೆ.

     ಆಗಸ್ಟ್ 16ಕ್ಕೆ ಅನುಗುಣವಾಗಿ ಅಮೆರಿಕ ಕಚ್ಚಾ ತೈಲ 3.5 ಮಿಲಿಯನ್ ಬ್ಯಾರೆಲ್‌ಗಳಷ್ಟು ಕುಸಿತ ಕಂಡಿದೆ ಎಂದು ಅಮೆರಿಕನ್ ಪೆಟ್ರೋಲಿಯಂ ಇನ್‌ಸ್ಟಿಟ್ಯೂಟ್ (ಎಪಿಐ) ಅಂಕಿ ಅಂಶಗಳು  ತೋರಿಸಿವೆ. 

   ಸರ್ಕಾರದ ಇಂಧನ ಮಾಹಿತಿ ಆಡಳಿತ (ಇಐಎ) ನೀಡಿದ ದಾಸ್ತಾನು ವಿವರದ ಪ್ರಕಾರ ಬರುವ ದಿನಮಾನಗಳಲ್ಲಿ ಕಚ್ಚಾ ತೈಲ ದಾಸ್ತಾನು ಇನ್ನು ದುಸ್ತರ ಸ್ಥಿತಿ ತಲುಪಲಿದೆ ಮತ್ತು ಬೆಲೆ ಗಗನಕ್ಕೇರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಸಮೀಕ್ಷೆ ತಿಳಿಸಿದೆ.

   “ಕೆನಡಾ ಸರ್ಕಾರ ಕಚ್ಚಾ ತೈಲದ ಮೇಲೆ ವಿಧಿಸಿರುವ ಭಾರೀ ನಿರ್ಬಂಧಗಳಿಂದಾಗಿ ಬೇರೆ ದೇಶಗಳು ಅಮೇರಿಕದ ರಿಫೈನರ್‌ಗಳ ಕಡೆ ಮುಖ ಮಾಡುವ ಅವಶ್ಯಕತೆ ಎದುರಾಗಿದೆ. ಮೆಕ್ಸಿಕೊ ಮತ್ತು ವೆನೆಜುವೆಲಾದಿಂದ ಕಡಿಮೆ ಸಾಗಣೆಯಿಂದ ತೈಲದ ಅಸ್ಥಿರತೆಯನ್ನು ತಡೆಯಲು ಹೆಣಗಾಡುತ್ತಿವೆ” ಎಂದು ತಜ್ಞರು ವಿಶ್ಲೇಷಸಿದ್ದಾರೆ.

   ಸಧ್ಯ ಭಾರತಕ್ಕೆ ಕಚ್ಚಾ ತೈಲವನ್ನು ಮಾರಾಟ ಮಾಡುವ ಪ್ರಮುಖ ದೇಶಗಳೂ ಸಹ ಜಾಗತಿಕ ಮಾರುಕಟ್ಟೆಯ ಮೇಲೆ ಆಧಾರವಾಗಿರುವುದರಿಂದ ಅವುಗಳೂಕೂಡ ತಮ್ಮ ಬೆಲೆಗಳನ್ನು ಏರಿಸುವ ಯೋಚನೆ ಮಾಡುತ್ತಿವೆ ಎಂದು ವರದಿಯಲ್ಲಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap